ಸಿದ್ದರಾಮಯ್ಯ ಷರಿಯಾ ಕಾನೂನು ತರಲು ಹೊರಟಿದ್ದಾರೆ; ಗಿರಿರಾಜ್ ಸಿಂಗ್
ನವದೆಹಲಿ; ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಕರ್ನಾಟಕ ಸರ್ಕಾರ ವಾಪಸ್ ಪಡೆದಿದೆ. ಈ ಬಗ್ಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ದೆಹಲಿಯಲ್ಲಿ ಮಾತನಾಡಿರುವ ಅವರು ಸಿದ್ದರಾಮಯ್ಯ ಸರ್ಕಾರದ ಉದ್ದೇಶ ಕೇವಲ ಹಿಜಾಬ್ ನಿಷೇಧ ವಾಪಸ್ ಪಡೆಯುವುದಲ್ಲ. ಷರಿಯಾ ಕಾನೂನನ್ನು ಜಾರಿಗೆ ತರುವುದೇ ಅವರ ಉದ್ದೇಶ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಷರಿಯಾ ಕಾನೂನು ಜಾರಿಯಾಗೋದು ಗ್ಯಾರೆಂಟಿ ಎಂದು ಜನರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.