ನಕಲಿ ವಿದೇಶಿ ಕರೆನ್ಸಿ ವಿತರಣೆ; ಆರೋಪಿ ಅರೆಸ್ಟ್
ಬೆಂಗಳೂರು; ದೆಹಲಿ ಮೂಲದ ವ್ಯಕ್ತಿಯೊಬ್ಬ ವಿದೇಶಿ ಕರೆನ್ಸಿ ನೀಡುವ ನೆಪದಲ್ಲಿ ಜನರನ್ನು ಯಾಮಾರಿಸುತ್ತಿದ್ದ ಜೆರಾಕ್ಸ್ ಮಾಡಿದ ದುಬೈ ಧೀರಮ್ ಗಳನ್ನು ನೀಡಿ ಮೋಸ ಮಾಡಿದ್ದ ಆತನನ್ನು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಲಾಗಿದೆ.
ದೆಹಲಿ ಮೂಲಸ ಇಮ್ರಾನ್ ಶೇಖ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಅರ್ಧ ಬೆಲೆಗೆ ದುಬೈ ಧೀರಮ್ ಗಳನ್ನು ನೀಡುತ್ತೇನೆ ಎಂದು ಯಾಮಾರಿಸುತ್ತಿದ್ದ.
ಆರೋಪಿಯಿಂದ ನೂರಕ್ಕೂ ಹೆಚ್ಚು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಮ್ರಾನ್ ಗೆ ಸಹಕರಿಸುತ್ತಿದ್ದ ರುಕ್ಸಾನ್ ಎಂಬಾತ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.