10 ನಿಮಿಷ ಎದೆ ಬಡಿತವೇ ನಿಂತು ಹೋಗಿತ್ತು..!; ಆದರೂ ಈ ನಟ ಬದುಕಿ ಬಂದ!
ಮುಂಬೈ; ಆ ಬಾಲಿವುಡ್ ನಟನಿಗೆ ಹೃದಯವೇ ಸ್ತಬ್ಧವಾಗಿತ್ತು. ಹತ್ತು ನಿಮಿಷ ಎದೆ ಬಡಿತವೇ ಇರಲಿಲ್ಲ. ಆದರೂ ಪವಾಡವೆಂಬಂತೆ ಆ ನಟ ಬದುಕಿ ಬಂದಿದ್ದಾನೆ. ಅವರು ಬೇರ್ಯಾರೂ ಅಲ್ಲ, ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ. ವೈದ್ಯರು ಆಂಜಿಯೋಪ್ಲಾಸ್ಟಿ ಮಾಡಿ, ನಿಂತೇ ಹೋಗಿದ್ದ ಹೃಯದ ಬಡಿತವನ್ನು ಮತ್ತೆ ಸರಿದಾರಿಗೆ ತಂದಿದ್ದಾರೆ.
ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ, ವೆಲ್‌ಕಮ್ ಟು ದಿ ಜಂಗಲ್ ಎಂಬ ಸಿನಿಮಾದ ಶೂಟಿಂಗ್‌ಗೆ ತೆರಳಿದ್ದರು. ಶೂಟಿಂಗ್ ಮುಗಿಸಿಕೊಂಡು ಡಿಸೆಂಬರ್ 14ರಂದು ಮನೆಗೆ ಹಿಂತಿರುಗುತ್ತಿದ್ದಾಗ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ವೇಳೆ ಅವರ ಹೃದಯಬಡಿತವೇ ನಿಂತುಹೋಗಿತ್ತು. ಆದರೂ ಪವಾರದ ರೀತಿಯಲ್ಲಿ ಅವರು ಬದುಕಿಬಂದಿದ್ದಾರೆ.
ಈ ಬಗ್ಗೆ ನಟ ಶ್ರೇಯಸ್ ಪತ್ನಿ ದೀಪ್ತಿ ತಲ್ಪಾಡೆ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ವೈದ್ಯರ ಸಮಯಪ್ರಜ್ಞೆ ಬಗ್ಗೆ ಕೊಂಡಾಡಿದ್ದಾರೆ.