ಮೈಸೂರಿನ ಮನೋರಂಜನ್ ಮನೆಗೆ 2 ಬಾರಿ ಬಂದಿದ್ದನಂತೆ ಆರೋಪಿ ಸಾಗರ್!
ಮೈಸೂರು; ಸಂಸತ್ತಿನಲ್ಲಿ ಕಲರ್ ಸ್ಮೋಕ್ ಸಿಡಿಸಿದ ಪ್ರಕರಣದಲ್ಲಿ ಬಂಧಿತನಾಗಿರುವ ಮೈಸೂರಿನ ಮನೋರಂಜನ್ ನ ಮೈಸೂರಿನ ನಿವಾಸಕ್ಕೆ ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ ಎರಡು ಬಾರಿ ಬಂದಿದ್ದ ಎಂಬುದು ಬಯಲಾಗಿದೆ. ದೆಹಲಿ ಹಾಗೂ ಮೈಸೂರು ಪೊಲೀಸರು ನಿನ್ನೆ ಮನೋರಂಜನ್ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಆರೋಪಿಗಳಲ್ಲೊಬ್ಬನಾದ ಸಾಗರ್ ಶರ್ಮಾ ಎರಡು ಬಾರಿ ಮನೋರಂಜನ್ ಮನೆಗೆ ಬಂದು ಹೋಗಿದ್ದ ಅನ್ನೋದು ಗೊತ್ತಾಗಿದೆ.
ನನ್ನ ಸಹಪಾಠಿ ಎಂದು ಸುಳ್ಳು ಹೇಳಿ ಸಾಗರ್ ಶರ್ಮಾನನ್ನು ಮನೋರಂಜನ್ ತನ್ನ ಮನೆಗೆ ಕರೆತಂದಿದ್ದ ಎನ್ನಲಾಗಿದೆ. ಮೈಸೂರಿನ ವಿಜಯನಗರಕ್ಕೆ ಸಾಗರ್ ಶರ್ಮಾನನ್ನು ಕರೆತಂದಾಗ ಯಾರು ಇವರು ಎಂದು ಅವರ ತಂದೆ-ತಾಯಿ ಕೇಳಿದ್ದರಂತೆ. ಈ ವೇಳೆ ಮನೋರಂಜನ್ ಈತ ನನ್ನ ಸಹಪಾಠಿ ಎಂದು ಹೇಳಿದ್ದನಂತೆ. ಮನೋರಂಜನ್ ಮನೆಯವರು ಸಾಗರ್ಗೆ ಊಟ ಮಾಡಿಸಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ.
ಈ ಸಾಗರ್ ಶರ್ಮಾ ಮೈಸೂರಿನಲ್ಲಿ ಇನ್ನೂ ಎಲ್ಲೆಲ್ಲಿ ಓಡಾಡಿದ್ದ? ಯಾರ್ಯಾರನ್ನು ಮೀಟ್ ಮಾಡಿದ್ದ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.