BengaluruBusiness

27ಕೋಟಿ ರೂ. ತೆರಿಗೆ ಬಾಕಿ; ಮಂತ್ರಿಮಾಲ್‌ಗೆ ಬೀಗ ಜಡಿದ ಬಿಬಿಎಂಪಿ

ಬೆಂಗಳೂರು: ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಂತ್ರಿಮಾಲ್‌ಗೆ ಬಿಬಿಎಂಪಿ ಪಶ್ಚಿಮ ವಲಯ ಅಧಿಕಾರಿಗಳು ಮತ್ತೆ ಬೀಗ ಜಡಿದಿದ್ದಾರೆ. ಈ ಹಿಂದೆ ಕೂಡಾ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಮಾಲ್‌ ಬಂದ್‌ ಮಾಡಲಾಗಿತ್ತು. ಕಾಲಾವಕಾಶ ಕೊಟ್ಟರೂ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಇಂದು ಮಂತ್ರಿಮಾಲ್‌ಗೆ ಬೀಗ ಹಾಕಲಾಗಿದೆ.

ಮಂತ್ರಿಮಾಲ್‌ ಇದುವರೆಗೆ ಸುಮಾರು 27 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ. 3 ವರ್ಷಗಳಿಂದ ತೆರಿಗೆ ಪಾವತಿ ಮಾಡಿರಲಿಲ್ಲ. ಹೀಗಾಗಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಅಕ್ಟೋಬರ್‌ನಲ್ಲಿ ಕೂಡಾ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿದ್ದರು. ಈ ವೇಳೆ ಮಂತ್ರಿಮಾಲ್‌ ಮಾಲ್‌ ಮಾಲೀಕರು 3 ಕೋಟಿ ರೂಪಾಯಿ ಪಾವತಿ ಮಾಡಿದ್ದರಿಂದ ಮಾಲ್‌ ತೆರೆಯಲು ಅವಕಾಶ ನೀಡಲಾಗಿತ್ತು ಎನ್ನಲಾಗಿದೆ.

 

Share Post