HealthLifestyle

ಇವರೆಡನ್ನೂ ಸೇರಿಸಿ ಮುಖಕ್ಕೆ ಹಚ್ಚಿದರೆ ಮೊಡವೆ ಮಾಯ..!

ಬೆಂಗಳೂರು; ಸಾಮಾನ್ಯವಾಗಿ, ಆಲೂಗೆಡ್ಡೆ ರಸವು ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಲು ಮತ್ತು ಆಕರ್ಷಕವಾಗಿ ಕಾಣಲು ಸಹಾಯ ಮಾಡುತ್ತದೆ. ಇದು ಚರ್ಮಕ್ಕೆ ಒಳ್ಳೆಯದು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು, ಮಿನರಲ್ಸ್ ಮತ್ತು ವಿಟಮಿನ್ ಗಳು ತ್ವಚೆಯನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ. ಆಲೂಗೆಡ್ಡೆ ರಸ ಮತ್ತು ರೋಸ್ ವಾಟರ್ ಅನ್ನು ಮುಖಕ್ಕೆ ಹಚ್ಚುವುದು ಚರ್ಮಕ್ಕೆ ಇನ್ನೂ ಒಳ್ಳೆಯದು.
   ಎರಡನ್ನೂ ಒಟ್ಟಿಗೆ ಅನ್ವಯಿಸುವುದು ಹೇಗೆ? ಇವುಗಳ ಸಂಪೂರ್ಣ ಪ್ರಯೋಜನಗಳೇನು ತಿಳಿಯೋಣ ಬನ್ನಿ. ಆಲೂಗಡ್ಡೆ ರಸ ಹಾಗೂ ರೋಸ್‌ ವಾಟರ್‌ ಎರಡನ್ನು ಒಟ್ಟಿಗೆ ಸೇರಿಸಿ ಹಚ್ಚಿದರೆ ಮುಖದ ಮೇಲಿನ ಮೊಡವೆ ಸಮಸ್ಯೆಯೂ ಕಡಿಮೆಯಾಗುತ್ತದೆ. ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ.
   ನಿಮ್ಮ ತ್ವಚೆಯು ಕಪ್ಪಾಗಿದ್ದರೆ ಆಲೂಗೆಡ್ಡೆ ರಸ ಮತ್ತು ರೋಸ್ ವಾಟರ್ ಎರಡೂ ಕೂಡ ಕಪ್ಪು ತ್ವಚೆಯನ್ನು ಹೋಗಲಾಡಿಸುತ್ತದೆ. ಚರ್ಮದ ಕಪ್ಪಾಗುವಿಕೆ ಮತ್ತು ಪಿಗ್ಮೆಂಟೇಶನ್ ಎರಡನ್ನೂ ತೆಗೆದುಹಾಕುತ್ತದೆ. ಇದಕ್ಕಾಗಿ ಎರಡನ್ನೂ ಒಟ್ಟಿಗೆ ತ್ವಚೆಯ ಮೇಲೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಇಟ್ಟು ಚರ್ಮವನ್ನು ಸ್ವಚ್ಛಗೊಳಿಸಿ. ರೋಸ್ ವಾಟರ್ ಮತ್ತು ಆಲೂಗೆಡ್ಡೆ ರಸವು ಚರ್ಮದ ಮೇಲೆ ಉಂಟಾಗುವ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎರಡನ್ನು ಒಂದು ಬೌಲ್‌ನಲ್ಲಿ ಮಿಶ್ರಣ ಮಾಡಿ ಮತ್ತು ಅದರಲ್ಲಿ ಅರಿಶಿನವನ್ನು ಹಾಕಬೇಕು. ಈಗ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ಮುಖವನ್ನು ಕ್ಲೀನ್ ಮಾಡಿದರೆ ಕಲೆಗಳು ಕಡಿಮೆಯಾಗಿ ಮುಖ ಕಾಂತಿಯುತವಾಗುತ್ತದೆ.
Share Post