ತಾಳಿ ಕಟ್ಟೋ ವೇಳೆಗೆ ಮದುವೆ ಬೇಡ ಎಂದಳು; ಕಾರಣ ಏನು ಗೊತ್ತಾ..?
ಚಿತ್ರದುರ್ಗ; ತಾಳಿ ಕಟ್ಟೋ ಸಮಯದಲ್ಲಿ ವಧುವೊಬ್ಬಳು ನನಗೆ ಈ ಮದುವೆ ಇಷ್ಟವಿಲ್ಲ ಎಂದಿದ್ದಾರೆ. ವರ ತಾಳಿ ಕಟ್ಟಲು ಬಂದಾಗ ಅದನ್ನು ಪಕ್ಕಕ್ಕೆ ತಳ್ಳಿ, ನನಗೆ ಈ ಮದುವೆ ಬೇಡ ಎಂದು ಮದುವೆ ಮಂಟಪದಿಂದ ಮೇಲೆದಿದ್ದಾಳೆ. ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಈ ಘಟನೆ ನಡೆದಿದೆ.
ಹಿಂದಿನ ದಿನ ರಿಸೆಪ್ಷನ್ ವೇಳೆ ಚೆನ್ನಾಗಿಯೇ ಇದ್ದ ವಧು ಇದ್ದಕ್ಕಿದ್ದಂತೆ ತಾಳಿ ಕಟ್ಟುವ ವೇಳೆಗೆ ಬದಲಾಗಿದ್ದಾಳೆ. ನಾನಿನ್ನೂ ಓದಬೇಕು. ಈಗಲೇ ನನಗೆ ಮದುವೆಯಾಗೋದು ಬೇಡ ಎಂದಿದ್ದಾಳೆ. ವಧುವಿನ ಪೋಷಕರು ಮದುವೆಯ ನಂತರವೂ ಓದಬಹುದು ಎಂದು ಹೇಳಿದರೂ ಆಕೆ ಕೇಳಿಲ್ಲ. ಯಾವುದೇ ಕಾರಣಕ್ಕೂ ನಾನು ಮದುವೆಯಾಗಲ್ಲ ಎಂದ ಆಕೆ ಮಂಟಪದಿಂದ ಎದ್ದುಹೋಗಿದ್ದಾಳೆ. ಇದರಿಂದಾಗಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಿದ್ಧತೆ ನಡೆಸಿದ್ದ ಮದುವೆ ಮುರಿದುಬಿದ್ದಿದೆ.
ಇದೀಗ ವಧು ಮದುವೆ ಬೇಡ ಎನ್ನುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.