ಕಾರಿಗೆ ಡಿಕ್ಕಿ ತಪ್ಪಿಸಲು ಹೋಗಿ ಹಳ್ಳಕ್ಕೆ ನುಗ್ಗಿದ ಬಸ್; ಪವಾಡ ರೀತಿಯಲ್ಲಿ 50 ಪ್ರಯಾಣಿಕರು ಸೇಫ್
ರಾಮನಗರ; ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆವುದನ್ನು ತಪ್ಪಿಸಲು ಹೋಗಿ ಸರ್ಕಾರಿ ಬಸ್ ಒಂದು ಹಳ್ಳಕ್ಕೆ ನುಗ್ಗಿದೆ. ಅದೃಷ್ಟವಶಾತ್ ಐವತ್ತು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮನಗರ ಜಿಲ್ಲೆ ಮೇಳೇಹಳ್ಳಿ ಗೇಟ್ ಬಳಿ ನಡೆದಿದೆ.
ಮಾಗಡಿಯಿಂದ ರಾಮನಗರಕ್ಕೆ ಬರುತ್ತಿದ್ದ ಕೆಎ 42, ಎಫ್- 1778 ನಂಬರಿನ ಬಸ್ಸೇ ಅಪಘಾತಕ್ಕೀಡಾಗಿರುವುದು. ಬಸ್ ಮೇಳೇಹಳ್ಳಿ ಗೇಟ್ ಬಳಿ ಬಂದಾಗ, ಎದುರಿಗೆ ಕಾರೊಂದು ಬಂದಿದ್ದು, ಬಸ್ ಡ್ರೈವರ್, ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿದ್ದಾರೆ. ಸ್ಟೇರಿಂಗ್ ಪಕ್ಕಕ್ಕೆ ಎಳೆದಾಗ ಬಸ್ ರಸ್ತೆ ಪಕ್ಕದ ಹಳ್ಳಕ್ಕೆ ನುಗ್ಗಿದೆ.
ಘಟನೆಯಲ್ಲಿ ಬಸ್ನ ಮುಂಭಾಗ ಕೊಂಚ ಜಖಂಗೊಂಡಿದೆ.