BengaluruHealth

ಹುಡುಕಿ ಹುಡುಕಿ ಲಸಿಕೆ ಹಾಕುತ್ತಿದ್ದೇವೆ; ಗೌರವ್‌ ಗುಪ್ತ

ಬೆಂಗಳೂರು: ಸರ್ಕಾರ ಆದೇಶ ಮಾಡಿದ ತಕ್ಷಣದಿಂದಲೇ ಕೊವಿಡ್‌ ಹೊಸ ಗೈಡ್‌ಲೈನ್ಸ್‌ ಜಾರಿ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ೨ ಡೋಸ್‌ ಲಸಿಕೆ ಪಡೆಯದವರ ಮೇಲೆ ನಿಗಾ ವಹಿಸಲಾಗಿದೆ. ಸಂಬಂಧಪಟ್ಟವರು ಅದನ್ನು ಮಾನಿಟರಿಂಗ್‌ ಮಾಡುತ್ತಿದ್ದಾರೆ. ಎರಡನೇ ಡೋಸ್‌ ಪಡೆದವರನ್ನು ಹುಡುಕಿ ಲಸಿಕೆ ಪಡೆಯುವಂತೆ ಸೂಚಿಸಲಾಗುತ್ತಿದೆ. ಒಂದೂ ಡೋಸ್‌ ಪಡೆಯದವರನ್ನೂ ಗುರುತಿಸಲಾಗುತ್ತಿದ್ದು, ಅವರಿಗೂ ಲಸಿಕೆ ಹಾಕಿಸಲಾಗುತ್ತಿದೆ ಎಂದರು.

ಇನ್ನು ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಲ್ತ್‌ವರ್ಕರ್ಸ್‌ಗೆ ಬೂಸ್ಟರ್‌ ಡೋಸ್‌ ನೀಡುವಂತೆ ಸಲಹೆ ನೀಡಲಾಗಿದೆ. ನಮ್ಮ ಅಭಿಪ್ರಾಯವನ್ನು ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿದೆ. ಸಿಎಂ ಬೊಮ್ಮಾಯಿ ಕೂಡಾ ಈಗಾಲೇ ಕೇಂದ್ರದ ಗಮನಕ್ಕೆ ತಂದಿದ್ದಾರೆ. ಕೇಂದ್ರ ಸೂಚಿಸಿದ ನಂತರ ಬೂಸ್ಟರ್‌ ಡೋಸ್‌ ನೀಡಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಗೌರವ್‌ ಗುಪ್ತ ತಿಳಿಸಿದರು.

(Photo illustration: Yahoo News; photos: Getty Images)
Share Post