ಒಂದೇ ಇನ್ನಿಂಗ್ಸ್ 10 ವಿಕೆಟ್ ಪಡೆದು ಕುಂಬ್ಳೆ ಸಾಧನೆ ಸರಿಗಟ್ಟಿದ ಅಜಾಜ್ ಪಟೇಲ್
ಮುಂಬೈ : IND vs NZ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಬೌಲರ್ ೧೦ ವಿಕೆಟ್ ಪಡೆದು ಕುಂಬ್ಳೆ ಸಾಧನೆ ಸರಿಗಟ್ಟಿದ್ದಾರೆ. ಈ ಮುಂಚೆ 1999ರಲ್ಲಿ ಭಾರತದ ಅನಿಲ್ ಕುಂಬ್ಳೆ ಅವರು ಪಾಕಿಸ್ತಾನದ ವಿರುದ್ಧ ಈ ಸಾಧನೆ ಮಾಡಿದ್ದರು. ಜಿಮ್ ಲೇಕರ್ ಅವರು ಕೂಡ 1956ರಲ್ಲಿ ಈ ಸಾಧನೆಗೈದಿದ್ದರು. ಒಂದೇ ಇನ್ನಿಂಗ್ಸ್ ಅಲ್ಲಿ ೧೦ ವಿಕೆಟ್ ತೆಗೆದುಕೊಂಡ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡರು ಅಜಾಜ್ ಪಟೇಲ್
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 325 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ಈ ವಿಶಿಷ್ಟ ಸಾಧನೆ ಮಾಡಿದ ಅಜಾಜ್ ಪಟೇಲ್ ಅನ್ನು ನ್ಯೂಜಿಲೆಂಡ್ ತಂಡದ ಆಟಗಾರರು ಮತ್ತು ಭಾರತದ ಆಟಗಾರರು ಅಭಿನಂದಿಸಿದರು.
ಇನ್ನು ಭಾರತದ ಪರ ಮಯಾಂಕ್ ಅಗರ್‌ವಾಲ್ 150ರನ್ ಗಳಿಸಿದ್ದಾರೆ..