BengaluruPolitics

ಮಗನ ವಿರುದ್ಧ ಸಿದ್ದರಾಮಯ್ಯ ಗರಂ; ಸಿಎಂ ಮನೆಗೆ ಡಿ.ಕೆ.ಶಿವಕುಮಾರ್‌ ದಿಢೀರ್‌ ಭೇಟಿ

ಬೆಂಗಳೂರು; ಯಾವುದೋ ಲಿಸ್ಟ್‌ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿರುವ ವಿಡಿಯೋ ವೈರಲ್‌ ಆಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ತೀವ್ರ ಮುಜುಗರ ತರಿಸಿದೆ. ವಿರೋಧ ಪಕ್ಷಗಳಿಗೆ ಈ ವಿಚಾರ ಅಸ್ತ್ರವಾಗಿದ್ದು, ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿಯವರು ಸುಲಿಗೆಪುತ್ರನಿಂದ ಕಾಸಿಗಾಗಿ ಹುದ್ದೆ ವ್ಯವಹಾರ ಎಂದು ಆರೋಪ ಮಾಡಿದ್ದಾರೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ತೀವ್ರ ಕೋಪ ತೋರಿದ್ದಾರೆ ಎನ್ನಲಾಗಿದೆ. ಮಗ ಯತೀಂದ್ರರನ್ನು ಮನೆಗೆ ಕರೆಸಿಕೊಂಡು ಬಹಿರಂಗವಾಗಿ ಮಾತನಾಡಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಯತೀಂದ್ರ ಅವರನ್ನು ಕರೆಸಿಕೊಂಡಿದ್ದು, ತಮ್ಮ ಪುತ್ರನ ಜೊತೆ ಸಿಎಂ ಸಿದ್ದರಾಮಯ್ಯ ಮಹತ್ವದ ಚರ್ಚೆ ನಡೆಸಿದ್ದಾರೆ. ನೀನು ಬಹಿರಂಗವಾಗಿ ಮಾತನಾಡಿದ್ದು ಯಾಕೆ..? ಎಂದು ಕೋಪದಿಂದಲೇ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಯತೀಂದ್ರ ಅವರು ಅದು ಕ್ಷೇತ್ರದ ವಿಚಾರವಾದ್ದರಿಂದ ಜನರ ಬಳಿಯಿಂದಲೇ ಮಾತನಾಡಿದೆ ಎಂದು ಸಮಜಾಯಿಷಿ ಕೊಟ್ಟರೂ ಸಿದ್ದರಾಮಯ್ಯ ಕೋಪ ತಣ್ಣಗಾಗಿಲ್ಲ ಎಂದು ಹೇಳಲಾಗುತ್ತಿದೆಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕ್ಷೇತ್ರದ ಕಾರ್ಯಕರ್ತರಿಗೆ ಸಂಬಂಧಿಸಿದ ವಿಚಾರವಾದರೂ ಮಾಧ್ಯಮಗಳ ಮುಂದೆ ಮಾತನಾಡಿದ್ದು ಯಾಕೆ ಎಂದು ಬೇಸರದಿಂದಲೇ ಕೇಳಿದ್ದಾರೆ ಎನ್ನಲಾಗಿದೆ.

ಇನ್ನು ಈ ವಿಚಾರ ದೊಡ್ಡದಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ದಿಢೀರ್‌ ಅಂತ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜೊತೆ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಈ ರಹಸ್ಯ ಸಭೆಯ ಬಗ್ಗೆ ಎಲ್ಲರಲ್ಲಿಯೂ ಕುತೂಹಲ ಮನೆಮಾಡಿದೆ.

 

Share Post