CrimeNational

ಮದ್ಯ ಕೊಡದಿದ್ದಕ್ಕೆ ವೈನ್‌ಶಾಪ್‌ಗೇ ಬೆಂಕಿ ಹಚ್ಚಿದ್ದ ಭೂಪ

ವಿಶಾಖಪಟ್ಟಣಂ; ಮದ್ಯ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ವೈನ್ ಶಾಪ್ ಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ವೈನ್ ಶಾಪ್ ಹಾಗೂ ಸಿಬ್ಬಂದಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ವಿಶಾಖಪಟ್ಟಣಂನಲ್ಲಿ ಈ ಘಟನೆ ನಡೆದಿದೆ. ವೈನ್ ಶಾಪ್‌ಗೆ ಬೆಂಕಿ ಹಚ್ಚಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೋತಿನಮಲಯ ಪಾಲೆಂ ಇನ್ಸ್ ಪೆಕ್ಟರ್ ರಾಮಕೃಷ್ಣ ಮಾತನಾಡಿ, ಮಧು ಎಂಬ ವ್ಯಕ್ತಿ ಮಧುರವಾಡ ಪ್ರದೇಶದ ವೈನ್ ಶಾಪ್ ಗೆ ಬಂದು ಮದ್ಯ ಕೇಳಿದ್ದಾನೆ. ಆದರೆ ಅಂಗಡಿ ಮುಚ್ಚುವ ಸಮಯವಾದ್ದರಿಂದ ಅಂಗಡಿ ಸಿಬ್ಬಂದಿ ಮದ್ಯ ನೀಡಿಲ್ಲ. ಆಗ ವ್ಯಕ್ತಿ ಅಂಗಡಿ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾನೆ. ವ್ಯಕ್ತಿ ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು. ನಂತರ ವ್ಯಕ್ತಿ ಅಲ್ಲಿಂದ ತೆರಳಿದ್ದಾನೆ.

ಭಾನುವಾರ ಸಂಜೆ ಅದೇ ವ್ಯಕ್ತಿ ಪೆಟ್ರೋಲ್ ಬಾಟಲಿಯೊಂದಿಗೆ ವೈನ್ ಶಾಪ್‌ಗೆ ಬಂದಿದ್ದಾನೆ. ಅಂಗಡಿಯೊಳಗೆ ಸಿಬ್ಬಂದಿಗೆ ಪೆಟ್ರೋಲ್ ಸುರಿದು ತಕ್ಷಣ ಬೆಂಕಿ ಹಚ್ಚಿದ್ದಾನೆ. ಅಂಗಡಿ ಸಿಬ್ಬಂದಿ ಓಡಿ ಹೋಗಿದ್ದು, ವೈನ್ ಶಾಪ್ ಸುಟ್ಟು ಕರಕಲಾಗಿದೆ. ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ 1.5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 307 ಮತ್ತು 436 ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ರಾಮಕೃಷ್ಣ ತಿಳಿಸಿದ್ದಾರೆ.

Share Post