NationalScience

ಪಠಾಣ್‌ ಕೋಟ್‌ನಲ್ಲಿ ಆಕಾಶದಲ್ಲಿ ಟ್ರೈನ್‌ ಓಡಿತು..!

ಪಠಾಣ್‌ ಕೋಟ್‌: ಪಠಾಣ್ ಕೋಟ್ ಮತ್ತು ಜಮ್ಮು ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಆಕಾಶದಲ್ಲಿ ವಿಚಿತ್ರ ದೀಪಗಳು ಕಾಣಿಸಿಕೊಂಡಿವೆ. ಆಕಾಶದಲ್ಲಿ ದೀಪಗಳು ಸಂಚರಿಸಿದಂತೆ ಕಂಡುಬಂದಿದ್ದು, ರೈಲು ಓಡುತ್ತಿದ್ದಂತೆ ಭಾಸವಾಯಿತು ಎಂದು ಅಲ್ಲಿನ ಜನ ಹೇಳಿದ್ದಾರೆ.

ರಾತ್ರಿ ವೇಳೆಯಲ್ಲಿ ಕಾಣಿಸಿಕೊಂಡ ಈ ವಿಚಿತ್ರ ದೃಶ್ಯವನ್ನು ನೋಡಿ ಸ್ಥಳೀಯರು ಬೆರಗಾಗಿದ್ದಾರೆ. ಐದು ನಿಮಿಷದವರೆಗೆ ಈ ಕೌತುಕ ಕಾಣಿಸಿತು ಅಂತ ಸ್ಥಳೀಯರು ಹೇಳಿದ್ದಾರೆ. ಐದು ನಿಮಿಷದ ನಂತರ ಆ ದೃಶ್ಯ ಮಾಯವಾಗಿದೆ.

Share Post