BengaluruHealth

ನಾಪತ್ತೆಯಾಗಿದ್ದ 10 ಮಂದಿಯಲ್ಲಿ 9 ಮಂದಿ ಪತ್ತೆ; ಒಮಿಕ್ರಾನ್‌ ತಡೆಗೆ ತೀವ್ರ ಕ್ರಮ

ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಬಂದು ನಾಪತ್ತೆಯಾಗಿದ್ದ 10 ಮಂದಿಯಲ್ಲಿ 9 ಮಂದಿಯನ್ನು ಪತ್ತೆ ಹಚ್ಚುವಲ್ಲಿ ಬಿಬಿಎಂಪಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಿನ್ನೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾತ್ರಿಯೊಳಗೆ ನಾಪತ್ತೆಯಾದವರನ್ನು ಪತ್ತೆ ಹಚ್ಚಬೇಕು ಎಂದು ಸೂಚನೆ ನೀಡಲಾಗಿತ್ತು. ಅದರಂತೆ ಹುಡುಕಾಟ ನಡೆಸಿದ ಅಧಿಕಾರಿಗಳು ಕೊನೆಗೂ 9 ಮಂದಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಒಮಿಕ್ರಾನ್‌ ಸೋಂಕು ಪತ್ತೆಯಾಗುತ್ತಿದ್ದಂತೆ ಭಯಬಿದ್ದಿದ್ದ 10 ಮಂದಿ ತಮ್ಮ ಮೊಬೈಲ್‌ಗಳನ್ನು ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು. ಜೊತೆಗೆ ಪಾಸ್‌ಪೋರ್ಟ್‌ನಲ್ಲಿದ್ದ ಅಡ್ರೆಸ್‌ನಲ್ಲಿ ಅವರು ಇರಲಿಲ್ಲ. ಹೀಗಾಗಿ ಅವರ ಸಂಬಂಧಿಕರನ್ನು ಮನೆಗಳಲ್ಲಿ ವಿಚಾರಿಸಿದಾಗ ಕೊನೆಗೂ ಅವರು ಪತ್ತೆಯಾಗಿದ್ದಾರೆ. ಮತ್ತೊಬ್ಬರ ಮೊಬೈಲ್‌ ಕೂಡಾ ಸ್ವಿಚ್‌ ಆಫ್‌ ಇದ್ದು, ಅವರಿಗಾಗಿ ಹುಡುಕಾಟ ನಡೆದಿದೆ. ಪತ್ತೆಯಾದ ಒಂಬತ್ತು ಜನರನ್ನೂ ಕ್ವಾರಂಟೀನ್‌ನಲ್ಲಿ ಇಡಲಾಗಿದ್ದು, ಅವರಿಗೆ ಕೊವಿಡ್‌ ಪರೀಕ್ಷೆ ಮಾಡಲಾಗಿದೆ.

Share Post