InternationalLifestyleNational

ವಿದೇಶಿ ಮಹಿಳೆಯ ಮನಗೆದ್ದ ಭಾರತದ ಬೀದಿ ನಾಯಿ!; ನೆದರ್ಲೆಂಡ್‌ಗೆ ಹಾರಲು ಜಯಾ ರೆಡಿ!

ಲಖನೌ; ನಾಯಿ ನಿಯತ್ತಿನ ಪ್ರಾಣಿ. ಅವುಗಳು ತೋರುವ ಪ್ರೀತಿಯಿಂದಾಗಿ ಕೆಲವರು, ನಾಯಿಗಳನ್ನು ಸ್ವಂತ ಮನೆಯ ಸದಸ್ಯರಂತೆ ನೋಡುತ್ತಾರೆ. ಅದೇ ರೀತಿ ನೆದರ್ಲೆಂಡ್‌ನಿಂದ ವಾರಾಣಸಿಗೆ ಮಹಿಳೆಯೊಬ್ಬರು ಬಂದಿದ್ದರು. ಆಕೆ, ಜಯಾ ಎಂಬ ಬೀದಿ ನಾಯಿಯನ್ನು ನೋಡಿ ಅದಕ್ಕೆ ಮನಸೋತಿದ್ದಳು. ಅದನ್ನು ದತ್ತು ಪಡೆದಿರುವ ಆಕೆ ಈಗ ಅದನ್ನು ತನ್ನ ದೇಶಕ್ಕೆ ಕೊಂಡೊಯ್ಯಲು ಸಿದ್ಧತೆ ನಡೆಸಿದ್ದಾಳೆ.

ಮೆರಲ್​ ಬೊಂಟೆನ್ಬೆಲ್​ ಎಂಬ ಆ್ಯಮ್​ಸ್ಟರ್​ಡ್ಯಾಂನ ಮಹಿಳೆ ವಾರಾಣಸಿಗೆ ಬಂದಿದ್ದಳು. ಈ ವೇಳೆ ಜಯಾ ಎಂಬ ಬೀದಿ ನಾಯಿ ಆಕೆಯ ಜೊತೆಗೇ ಸುತ್ತಾಡಿದೆ. ಇದರಿಂದ ಆಕೆ ಆ ನಾಯಿಗೆ ಪ್ರೀತಿಯಿಂದ ಆಹಾರ ಕೊಟ್ಟಿದ್ದಾಳೆ. ಇದಕ್ಕಾಗಿ ಆ ನಾಯಿ ತೋರಿದ ಪ್ರೀತಿಗೆ ಆಕೆ ಮನಸೋತಿದ್ದಾಳೆ. ಕೊನೆಗೆ ಈ ಬೀದಿ ನಾಯಿಯನ್ನು ಮೆರೆಲ್​ ತನ್ನೂರಿಗೆ ಕರೆದುಕೊಂಡು ಹೋಗಬೇಕೆಂದು ತೀರ್ಮಾನಿಸಿದ್ದಾಳೆ.

ಜಯಾಳಿಗೋಸ್ಕರ ಮೆರೆಲ್​ ಸ್ಥಳೀಯಾಡಳಿತ ಜೊತೆಗೆ ಮಾತನಾಡಿ, ಅದಕ್ಕಾಗಿ ಪ್ರಮಾಣ ಪತ್ರ ತಯಾರಿಸಿ ಅನುಮತಿ ಪಡೆದಿದ್ದಾರೆ. ನಾಯಿಯನ್ನ ದತ್ತು ಪಡೆಯುವ ಮೂಲಕ ವಿದೇಶಕ್ಕೆ ಕರೆದೊಯ್ಯಲು ಎಲ್ಲಾ ದಾಖಲೆಗಳನ್ನು ರೆಡಿ ಮಾಡಿಕೊಂಡಿದ್ದು, ನೆದರ್ಲೆಂಡ್​ನಿಂದಲೂ ಜಯಾಳಿಗಾಗಿ ವೀಸಾ ತರಿಸಿಕೊಂಡಿದ್ದಾರೆ. ಅಚ್ಚರಿ ಸಂಗತಿ ಎಂದರೆ ಮೆರಲ್​ ತನ್ನ ಮನಸ್ಸು ಗೆದ್ದ ಬೀದಿ ಶ್ವಾನಕ್ಕಾಗಿ ಆರು ತಿಂಗಳ ಕಾಲ ಭಾರತದಲ್ಲೇ ಇದ್ದರಂತೆ.

Share Post