BengaluruPolitics

ನಕಲಿಗಳಿಗೂ ಉತ್ತರ ಕೊಡುತ್ತೇವೆ, ಲೂಟಿಗಳಿಗೂ ಉತ್ತರಿಸುತ್ತೇವೆ; ಡಿ.ಕೆ.ಶಿವಕುಮಾರ್‌

ಬೆಂಗಳೂರು; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಯಾರಿಗೆ ಏನು ಉತ್ತರ ಕೊಡೋಬೇಕೋ ಕೊಡುತ್ತೇವೆ ಎಂದು ಹೇಳಿದ್ದಾರೆ.

ನಕಲಿಗಳಿಗೂ ಉತ್ತರ ಕೊಡುತ್ತೇವೆ, ಲೂಟಿಗಳಿಗೂ ಉತ್ತರ ಕೊಡುತ್ತೇವೆ. ಹೈವೋಲ್ಟೇಜ್‌ಗಳಿಗೂ ಉತ್ತರ ಕೊಡುತ್ತೇವೆ, ಲೋ ವೋಲ್ಟೇಜ್‌ಗಳಿಗೂ ಉತ್ತರಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಎಲ್ಲಾ ವಿಚಾರಗಳ ಬಗ್ಗೆಯೂ ನಾವು ಬಿಚ್ಚಿಡುತ್ತೇವೆ. ಅವರು ಪ್ರತಿಭಟನೆ ಮಾಡಲಿ, ಲೂಟಿಕೋರರ ಆರೋಪಗಳಿಗೆ ಎಲ್ಲದಕ್ಕೂ ನಾವು ಉತ್ತರ ಕೊಡುತ್ತೇವೆ ಎಂದು ಹೇಳಿದ್ದಾರೆ.

 

Share Post