42 ಕೋಟಿ ರೂ. ಪತ್ತೆ ಕೇಸ್; ಇದು ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ ಕರಾಮತ್ತು ಎಂದ ಹೆಚ್ಡಿಕೆ
ಬೆಂಗಳೂರು; ಆಯ್ದು ಗುತ್ತಿಗೆದಾರರಿಗೆ ಬಿಬಿಎಂಪಿಯಿಂದ 650 ಕೋಟಿ ರೂಪಾಯಿ ಬಿಲ್ ಹಣ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ 42 ಕೋಟಿ ರೂಪಾಯಿ ಸಿಕ್ಕಿಬಿದ್ದಿದೆ. ಇದು ಬೆಂಗಳೂರು ನಗದು ಅಭಿವೃದ್ಧಿ ಇಲಾಖೆಯ ಕೈ ಕರಾಮತ್ತು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿರುವ 42 ಕೋಟಿ ರೂಪಾಯಿ ಹಣದ ಮೂಲ ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ. ಗುತ್ತಿಗೆದಾರರಿಗೆ ಹಣ ಬಿಡುಗಡೆಯಾದ ಬೆನ್ನಲ್ಲೇ ಈ ಹಣ ಸಿಕ್ಕಿರುವುದರಿಂದ ಕಲೆಕ್ಷನ್ ನಿಜ ಅನ್ನೋದು ಸಾಬೀತಾಗಿದೆ. ಅದು ಎಷ್ಟು ಪರ್ಸೆಂಟೇಜ್‌ನ ಹಣ..? ಇದರ ಹಿಂದೆ ಅಡಗಿ ಕುಳಿತಿರುವ ಆದಿಪುರುಷರು ಯಾರು ಅನ್ನೋದು ಗೊತ್ತಾಗಬೇಕು ಎಂದು ಹೆಚ್ಡಿಕೆ ಆಗ್ರಹ ಮಾಡಿದ್ದಾರೆ.
ಪಂಚರಾಜ್ಯ ಚುನಾವಣೆ ಘೋಷಣೆ ಆಗಿದ್ದೇ ತಡ ಕುರುಡು ಕಾಂಚಾಣ ಕುಣಿಯೋಕೆ ಶುರು ಮಾಡಿದೆ. ಕಾಟನ್ ಬಾಕ್ಸ್‌ಗಳಲ್ಲಿ, ಮಂಚದ ಕೆಳಗೆ ಕಾಂಚಾಣ ಕುಣಿಯುತ್ತಿದೆ. ಈ ಹಣ ತೆಲಂಗಾಣಕ್ಕೆ ಹೊರಡು ನಿಂತಿತ್ತು ಎಂದು ಹೆಚ್ಡಿಕೆ ಆರೋಪ ಮಾಡಿದ್ದಾರೆ.