BengaluruCrime

ಪ್ರೀತಿಗೆ ವಿರೋಧ; ಕೋಳಿ ಕುಯ್ಯುವ ಚಾಕುವಿನಿಂದ ಮಗಳ ಕೊಂದ ತಂದೆ

ದೇವನಹಳ್ಳಿ; ತನ್ನ ಇಬ್ಬರು ಹೆಣ್ಣು ಮಕ್ಕಳೂ ಪ್ರೀತಿಯ ಬಲೆಗೆ ಬಿದ್ದಿರುವುದನ್ನು ಕೇಳಿ ಆಕ್ರೋಶಗೊಂಡ ತಂದೆಯೊಬ್ಬ ಊರಲ್ಲಿ ಮರ್ಯಾದೆ ಹೋಗುತ್ತೆ ಅನ್ನೋ ಕಾರಣಕ್ಕೆ ಹಿರಿಯ ಮಗಳ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ದೇವನಹಳ್ಳಿ ತಾಲ್ಲೂಕಿನ ಬಿದಲೂರಿನಲ್ಲಿ ನಡೆದಿದೆ. 

ಇಪ್ಪತ್ತು ವರ್ಷದ ಕವನಾ ಎಂಬಾಕೆಯೇ ಕೊಲೆಯಾದ ದುರ್ದೈವಿ. ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ತಂದೆ ಮಂಜುನಾಥ್‌ ಕೋಳಿ ಕುಯ್ಯುವ ಚಾಕುವಿನಿಂದ ರಾತ್ರಿ ಮಲಗಿದ್ದ ಮಗಳ ಕತ್ತು ಕುಯ್ದು ಕೊಲೆ ಮಾಡಿದ್ದಾನೆ. ನಂತರ ವಿಶ್ವನಾಥಪುರ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಮಂಜುನಾಥ್‌ ಅವರ ಕಿರಿಯ ಮಗಳು ಕೂಡಾ ಯುವಕನೊಬ್ಬನನ್ನು ಪ್ರೀತಿಸಿದ್ದಳು. ಆತನ ಜೊತೆಗೇ ಹೋಗುವುದಾಗಿ ಪಟ್ಟು ಹಿಡಿದಿದ್ದಳು. ಅಲ್ಲದೇ ಪೊಲೀಸ್‌ ಠಾಣೆ ಮೆಟ್ಟಿಲು ಕೂಡಾ ಏರಿದ್ದಳು. ಇದೀಗ ಆಕೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾಳೆ. ಹೀಗಿರುವಾಗಲೇ ಹಿರಿಯ ಮಗಳು ಕವನಾ ಕೂಡಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳಂತೆ. ಆಕೆ ಕೂಡಾ ನಾನು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಆತನ ಜೊತೆಯೇ ಹೋಗುತ್ತೇನೆ ಎಂದಿದ್ದಾಳೆ.

ಇದರಿಂದ ಆಕ್ರೋಶಗೊಂಡ ತಂದೆ ಮಂಜುನಾಥ್‌ ರಾತ್ರಿ ಮಗಳು ಮಲಗಿದ ನಂತರ ಕತ್ತುಕುಯ್ದು ಸಾಯಿಸಿದ್ದಾನೆ.

 

 

Share Post