CrimeDistrictsPolitics

ಮೈಸೂರಿನ ಸಿಎಂ ನಿವಾಸದ ಮೇಲೆ ಕಲ್ಲೆಸೆದ ವ್ಯಕ್ತಿ..!

ಮೈಸೂರು; ಮೈಸೂರಿನ ಟಿ.ಕೆ.ಲೇಔಟ್‌ ನಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸದ ಮೇಲೆ ವ್ಯಕ್ತಿಯೊಬ್ಬರು ಕಲ್ಲೆಸೆದಿದ್ದಾನೆ. ಪೊಲೀಸರು ನೋಡುತ್ತಿರುವಾಗಲೇ ವ್ಯಕ್ತಿ ಕಲ್ಲೆಸೆದಿದ್ದು, ಪೊಲೀಸರು ಕೂಡಲೇ ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮೈಸೂರಿನ ಸತ್ಯಮೂರ್ತಿ ಎಂಬುವವರೇ ಸಿಎಂ ಸಿದ್ದರಾಮಯ್ಯ ಅವರ ಮನೆ ಮೇಲೆ ಕಲ್ಲೆಸೆದ ವ್ಯಕ್ತಿ. ಈತ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮತದಾನ ನಡೆಸಿದ ನಂತರ ಇವಿಎಂ ಒಡೆದಿದ್ದ. ಇದೀಗ ಆತನೇ ಸಿಎಂ ಸಿದ್ದರಾಮಯ್ಯ ನಿವಾಸದ ಮೇಲೆ ಕಲ್ಲು ಎಸೆಯಲಾಗಿದೆ. ಇಂದು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇದೀಗ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Share Post