Sports

ಒಮಿಕ್ರಾನ್‌ ಭೀತಿ – ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ರದ್ದಾಗುವ ಸಾಧ್ಯತೆ

ಮುಂಬೈ: ನ್ಯೂಜಿಲೆಂಡ್ ಸರಣಿ ಮುಗಿದ ಬಳಿಕ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸ ನಿಗದಿಯಾಗಿತ್ತು. ಆದರೆ ಇದೀಗ ಓಮಿಕ್ರಾನ್ ಭೀತಿಯಿಂದಾಗಿ ಈ ಪ್ರವಾಸ ರದ್ದಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ವರದಿಯಾಗಿದೆ.

ದಕ್ಷಿಣ ಆಫಿಕಾ ಪ್ರವಾಸದಲ್ಲಿ ಭಾರತ ತಂಡ 3 ಟೆಸ್ಟ್, 3 ಏಕದಿನ ಮತ್ತು 4 ಟಿ20 ಸರಣಿಗೆ ಈಗಾಗಲೇ ವೇಳಾಪಟ್ಟಿ ಕೂಡ ನಿಗದಿಯಾಗಿದ್ದು, ಡಿಸೆಂಬರ್ 17 ರಿಂದ ಮೊದಲ ಟೆಸ್ಟ್ ಪಂದ್ಯ ಜೋಹನ್‍ಬರ್ಗ್‍ನಲ್ಲಿ ನಿಗದಿಯಾಗಿತ್ತು. ಇದೀಗ ವಿಶ್ವದಾದ್ಯಂತ ಮತ್ತೆ ಕಾಟ ಆರಂಭಿಸಿರುವ ಕೊರೊನಾ ರೂಪಾಂತರಿ ತಲಿ ಓಮಿಕ್ರಾನ್‍ನಿಂದಾಗಿ ಈ ಸರಣಿ ರದ್ದಾಗುವ ಸಾಧ್ಯತೆ ಹೆಚ್ಚಿದೆ.

Share Post