ನವೆಂಬರ್‌ನಲ್ಲಿ ಜಾತಿಗಣತಿ ನನ್ನ ಕೈಸೇರುತ್ತೆ; ಸಿಎಂ ಸಿದ್ದರಾಮಯ್ಯ
ಮೈಸೂರು; ಜಾತಿವಾರು ಜನಗಣತಿಯನ್ನು ಇತ್ತೀಚೆಗೆ ಬಿಹಾರದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ 2015ರಲ್ಲಿ ಜಾತಿವಾರು ಜನಗಣತಿ ಆಗಿತ್ತು. ಅದನ್ನೂ ಬಿಡಗುಡೆ ಮಾಡಬೇಕು ಎಂದು ಕರ್ನಾಟಕದ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ನವೆಂಬರ್ ತಿಂಗಳಿನಲ್ಲಿ ಜಾತಿ ಗಣತಿ ವರದಿ ನನ್ನ ಕೈ ಸೇರಬಹುದು. ಆ ನಂತರ ಪರಿಶೀಲಿಸಿ, ಬಿಡುಗಡೆ ಮಾಡಬೇಕೆ, ಬೇಡವೇ ಎಂಬುದರ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಜನಗಣತಿ ಮಾಡುವ ಸಮಿತಿ ಅಧ್ಯಕ್ಷರು ಬದಲಾಗಿದ್ದಾರೆ, ಹೀಗಾಗಿ ಅವರು ನವೆಂಬರ್‌ನಲ್ಲಿ ಜಾತಿ ಗಣತಿ ವರದಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಜಾತಿ ಜನಗಣತಿ ಸಮಾಜಕ್ಕೆ ಮಾರಕವಲ್ಲ, ಯಾವ ಸಮೂದಾಯ ಎಷ್ಟಿದೆ ಎಂಬುವುದನ್ನು ಅಂಕಿ-ಅಂಶಗಳು ಸರ್ಕಾರಕ್ಕೆ ಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.