BengaluruCrime

ಎಸ್‌.ಆರ್‌.ವಿಶ್ವನಾಥ್‌ ಕೊಲೆಗೆ ಸ್ಕೆಚ್‌ ವಿಚಾರ; ಪೊಲೀಸರ ಮುಂದೆ ಯಲಹಂಕ ಶಾಸಕ ಹೇಳಿಕೆ

ರಾಜಾನುಕುಂಟೆ: ಪೊಲೀಸರು ನೋಟಿಸ್‌ ಕೊಟ್ಟ ಹಿನ್ನೆಲೆಯಲ್ಲಿ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ರಾಜನುಕುಂಟೆ ಪೊಲೀಸರ ಮುಂದೆ ಹಾಜರಾಗಿದ್ದರು. ವಿಶ್ವನಾಥ್‌ ಅವರ ಕೊಲೆಗೆ ಸ್ಕೆಚ್‌ ರೂಪಿಸಿದ್ದರ ಬಗ್ಗೆ ನಿನ್ನೆ ವಿಡಿಯೋ ಹಾಗೂ ಆಡಿಯೋ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು, ನಿನ್ನೆ ರಾಜಾಕುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಮಾಹಿತಿ ಪಡೆಯಲು ವಿಶ್ವನಾಥ್‌ ಅವರನ್ನು ಠಾಣೆಗೆ ಕರೆಸಿದ್ದರು.

ಬಹಿರಂಗವಾದ ಆಡಿಯೋ, ವಿಡಿಯೋ ಬಗ್ಗೆ ಮಾಹಿತಿ ಕೇಳಲು ಪೊಲೀಸರು ಶಾಸಕ ವಿಶ್ವನಾಥ್‌ ಅವರನ್ನು ಠಾಣೆಗೆ ಕರೆದಿದ್ದರು. ಈ ವೇಳೆ ವಿಶ್ವನಾಥ್‌ ಅವರು ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿದ್ದಾರೆ. ಜೊತೆಗೆ ಪೊಲೀಸರು ಕೇಳಿದ ದಾಖಲೆಗಳನ್ನು ಒದಗಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವನಾಥ್‌, ಪೊಲೀಸರಿಗೆ ಎಲ್ಲಾ ಮಾಹಿತಿ ಕೊಟ್ಟಿದ್ದೇನೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲೇಬೇಕು. ಯಾವುದೇ ಕಾರಣಕ್ಕೂ ನಾನು ಈ ಕೇಸ್‌ ಬಿಡುವುದಿಲ್ಲ ಎಂದು ಹೇಳಿದ್ದಾರೆ.

Share Post