DistrictsPolitics

ಜೆಡಿಎಸ್‌ ಶಾಸಕನ ಕಚೇರಿ ಉದ್ಘಾಟಿಸಿದ ಸಚಿವ; ಕಾಂಗ್ರೆಸ್‌ ಸೇರ್ತಾರಾ ಶರಣಗೌಡ..?

ಯಾದಗಿರಿ; ರಾಜ್ಯದಲ್ಲಿ ಆಪರೇಷನ್‌ ಹಸ್ತದ ಸದ್ದು ಜೋರಾಗಿ ಕೇಳಿಬರುತ್ತಿದೆ. ಕಾಂಗ್ರೆಸ್‌ ನಾಯಕರು, ಒಳೊಳಗೇ ಜೆಡಿಎಸ್‌ ಹಾಗೂ ಬಿಜೆಪಿ ನಾಯಕರಿಗೆ ಗಾಳ ಹಾಕುತ್ತಿದ್ದಾರೆ. ಅದಕ್ಕೆ ಸಾಕಷ್ಟು ಸಾಕ್ಷಿಗಳೂ ಸಿಗುತ್ತಿವೆ. ಇತ್ತ ಜೆಡಿಎಸ್‌ ಶಾಸಕರೊಬ್ಬರಿಗೆ ಕಾಂಗ್ರೆಸ್‌ ಗಾಳ ಹಾಕಿದಂತೆ ಕಾಣುತ್ತಿದೆ. ಯಾಕಂದ್ರೆ ಜೆಡಿಎಸ್‌ ಶಾಸಕರ ಜನಸಂಪರ್ಕ ಕಚೇರಿ ಉದ್ಘಾಟನೆಯಲ್ಲಿ ಕಾಂಗ್ರೆಸ್‌ ಸರ್ಕಾರದ ಸಚಿವರು ಪಾಲ್ಗೊಂಡಿದ್ದಾರೆ.

ಗುರುಮಿಠಕಲ್​​ನಲ್ಲಿ ಜೆಡಿಎಸ್​ ಶಾಸಕ ಶರಣಗೌಡ ಕಂದಕೂರು ಅವರು ಜನ ಸಂಪರ್ಕ ಕಚೇರಿ ತೆರೆದಿದ್ದಾರೆ. ಇದನ್ನು ಉದ್ಘಾಟನೆ ಮಾಡಿರೋದು ಕಾಂಗ್ರೆಸ್‌ ಸರ್ಕಾರದ ಸಚಿವ ಶರಣಬಸಪ್ಪ ದರ್ಶನಾಪುರ ಅವರು. ಸಾಮಾನ್ಯವಾಗಿ ಇಂತ ಸನ್ನಿವೇಶ ಎಲ್ಲೂ ಕಾಣಸಿಗೋದಿಲ್ಲ. ಪಕ್ಷಾಂತರದ ಸುಳಿವು ಇದ್ದಾಗ ಮಾತ್ರ ಈ ತರದದ್ದು ಆಗುತ್ತೆ. ಅದರಲ್ಲೂ ರಾಜ್ಯದಲ್ಲಿ ಆಪರೇಷನ್‌ ಹಸ್ತದ ವಿಷಯ ಹೆಚ್ಚು ಸದ್ದು ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಒಬ್ಬ ಸಚಿವರು ಜೆಡಿಎಸ್‌ ಶಾಸಕನ ಕಚೇರಿ ಉದ್ಘಾಟನೆ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಇದನ್ನು ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರು ಅವರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ಮೈತ್ರಿಯನ್ನು ನಾನು ಯಾವುದೇ ಕಾರಣಕ್ಕೂ ಒಪ್ಪಲ್ಲ. ನಮ್ಮ ವರಿಷ್ಠ ನಾಯಕರು ಮೈತ್ರಿ ಮಾಡಿಕೊಂಡರೆ ನಮ್ಮ ಕ್ಷೇತ್ರದ ಮತದಾರರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದ್ದರು.

ಈ ಬೆನ್ನಲೇ ಅವರ ಕಚೇರಿ ಉದ್ಘಾಟನೆ ಕಾಂಗ್ರೆಸ್‌ ಸಚಿವರು ಬಂದಿರುವುದು ಚರ್ಚೆಯನ್ನು ಹುಟ್ಟು ಹಾಕಿದೆ.

Share Post