HealthInternational

ಈ ಮೀನು ತಿಂದು ನಾಲ್ಕು ಅಂಗ ಕಳೆದುಕೊಂಡ ಮಹಿಳೆ..!

ನ್ಯೂಯಾರ್ಕ್; ಮೀನು ತಿಂದು ಪ್ರಾಣಕ್ಕೆ ತಂದುಕೊಂಡವರನ್ನು ಯಾರಾದರೂ ನೋಡಿದ್ದೀರಿ. ಇಲ್ಲೊಂದು ಅಂತಹ ಘಟನೆ ನಡೆದಿದೆ. ಇದು ಅಚ್ಚರಿಯಾದರೂ ಸತ್ಯ. ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಬರು ಅರೆಬೆಂದ ಮೀನೊಂದನ್ನು ತಿಂದು, ದೇಹದ ಪ್ರಮುಖ ನಾಲ್ಕು ಅಂಗಗಳನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಅವರು ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.

ನಲವತ್ತು ವರ್ಷದ ಲಾರಾ ಬರಾಜಾಸ್‌ ಎಂಬಾಕೆಯೇ ಸಂಕಷ್ಟ ಅನುಭವಿಸುತ್ತಿರುವ ಮಹಿಳೆ. ಈಕೆ ತಿಲಾಪಿಯಾ ಎಂಬ ಮೀನನ್ನು ಸೇವಿಸಿದ್ದಳು. ಮೀನು ಸರಿಯಾಗಿ ಬೆಂದಿರಲಿಲ್ಲ ಎನ್ನಲಾಗಿದೆ. ಈ ಮೀನು ತಿಂದ ಕೆಲ ಕೆಲ ಹೊತ್ತಿನಲ್ಲೇ ಆಕೆ ತೀವ್ರ ಅಸ್ವಸ್ಥಗೊಂಡಿದ್ದಳು. ಹೀಗಾಗಿ ಲಾರಾ ಬರಾಜಾಸ್‌ಳನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.

ಪಾದಗಳು, ಬೆರಳುಗೂ, ತುಟಿಗಳು ಕಪ್ಪು ಬಣ್ಣಕ್ಕೆ ತಿರುಗಿದ್ದವು. ಲಾರಾಳ ಮೂತ್ರಪಿಂಡಗಳು ಕೂಡಾ ಸಂಪೂರ್ಣ ವಿಫಲಗೊಂಡಿದ್ದವು. ಇದರಿಂದಾಗಿ ಆಕೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಳು. ಕಳೆದ ಕೆಲ ತಿಂಗಳಿಂದ ಚಿಕಿತ್ಸೆ ಪಡೆದ ಆಕೆಗೆ ಈಗ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದೀಗ ಲಾರಾ ಚೇತರಿಸಿಕೊಳ್ಳುತ್ತಿದ್ದಾಳೆ.

ಸಮುದ್ರದ ನೀರಿನಲ್ಲಿ ಕಂಡುಬರುವ ಸಂಭಾವ್ಯ ಮಾರಣಾಂತಿಕ ಬ್ಯಾಕ್ಟೀರಿಯ ‘ವಿಬ್ರಿಯೊ ವಲ್ನಿಫಿಕಸ್’ ಮೀನಿನ ಮೂಲಕ ಲಾರಾಳ ದೇಹ ಸೇರಿದ್ದೇ ಇದಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.

 

Share Post