HealthNational

ಕೋವಿಡ್‌ಗಿಂತ ನಿಫಾ ವೈರಸ್‌ ಸೋಂಕಿತರ ಮರಣ ಪ್ರಮಾಣ ಹೆಚ್ಚು

ನವದೆಹಲಿ; ಕೇರಳದಲ್ಲಿ ನಿಫಾ ವೈರಸ್‌ ಭೀತಿಯನ್ನುಂಟುಮಾಡುತ್ತಿದೆ. ಇದುವರೆಗೆ ಕೇರಳದಲ್ಲಿ ಇಬ್ಬರು ವ್ಯಕ್ತಿಗಳು ನಿಫಾ ವೈರಸ್‌ಗೆ ಬಲಿಯಾಗಿದ್ದಾರೆ. ಮತ್ತೊಬ್ಬ ಬಾಲಕನ ಸ್ಥಿತಿ ಗಂಭೀರವಾಗಿದೆ. ಸೋಂಕಿತರ ಸಂಖ್ಯೆ ಆರಕ್ಕೇರಿದ್ದು, ಕೇರಳದಲ್ಲಿ ಹೈಅಲರ್ಟ್‌ ಘೋಷಣೆ ಮಾಡಲಾಗಿದೆ.

ಅಂದ್ಹಾಗೆ, ಭೀತಿಗೆ ಕಾರಣವಾಗಿರೋದು ನಿಫಾ ವೈರಸ್‌ ಸೋಂಕಿತರ ಮರಣದ ಪ್ರಮಾಣ ಜಾಸ್ತಿಯಾಗಿರೋದು. ತಜ್ಞರ ಪ್ರಕಾರ ಕೊರೊನಾ ವೈರಸ್‌ಗಿಂತ ನಿಫಾ ವೈರಸ್‌ ಸೋಂಕಿತರ ಮರಣ ಪ್ರಮಾಣ ಹೆಚ್ಚಂತೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮುಖ್ಯಸ್ಥ ಡಾ.ರಾಜೀವ್ ಬಹ್ಲ್ ಮಾಹಿತಿ ನೀಡಿದ್ದಾರೆ. ಕೋವಿಡ್‌ ಸೋಂಕಿತರಲ್ಲಿ ಮರಣ ಪ್ರಮಾಣ ಶೇ.2 ರಿಂದ 3ರಷ್ಟು ಮಾತ್ರ ಇದೆ. ಆದ್ರೆ ಕೊವಿಡ್‌ಗೆ ಹೋಲಿಕೆ ಮಾಡಿದರೆ, ನಿಫಾ ವೈರಸ್‌ ಸೋಂಕಿತರ ಮರಣ ಪ್ರಮಾಣ ಶೇ.40 ರಿಂದ 7oರಷ್ಟಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಕೇರಳದ ಕೋಯಿಕೋಡಿನಲ್ಲಿ ನಿಫಾ ವೈರಸ್‌ ಹೊಸ ಪ್ರಕರಣ ಪತ್ತೆಯಾಗಿದೆ. ವ್ಯಕ್ತಿಯೊಬ್ಬರಲ್ಲಿ ನಿಫಾ ವೈರಸ್‌ ಇರುವುದು ದೃಢಪಟ್ಟಿದೆ. ಇದರಿಂದಾಗಿ ಕೇರಳದಲ್ಲಿ ಸೋಂಕಿತರ ಸಂಖ್ಯೆ ಆರಕ್ಕೇರಿದೆ.

 

Share Post