NationalScience

ಇಂದಿನಿಂದ ಸೂರ್ಯ ಶಿಕಾರಿ ಶುರು; ನಭಕ್ಕೆ ಆದಿತ್ಯ ಎಲ್‌-1

ಬೆಂಗಳೂರು; ಇಸ್ರೋ ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ಸೂರ್ಯನ ಅಧ್ಯಯನಕ್ಕೆ ಮುಂದಾಗಿದ್ದು, ಇಂದು ಇಸ್ರೋ ಆದಿತ್ಯ ಎಲ್‌-೧ ನೌಕೆಯನ್ನು ಉಡಾವಣೆ ಮಾಡಲಾಗುತ್ತದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಇಂದು ಬೆಳಗ್ಗೆ 11.50ಕ್ಕೆ ಸರಿಯಾಗಿ ಆದಿತ್ಯ ಎಲ್‌-೧ ನೌಕೆ ಉಡಾವಣೆ ಮಾಡಲಾಗುತ್ತದೆ. ಇದಕ್ಕಾಗಿ ಇಸ್ರೋ ವಿಜ್ಞಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಸೂರ್ಯನ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ಈ ನೌಕೆಯನ್ನು ಕಳುಹಿಸಲಾಗುತ್ತಿದೆ. ಇದು ಅತಿಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟಮೊದಲ ಬಾಹ್ಯಾಕಾಶ ನೌಕೆಯಾಗಿದೆ. ಆದಿತ್ಯ ಎಲ್‌-೧ 15 ಲಕ್ಷ ಕಿಲೋ ಮೀಟರ್‌ ಮೇಲೆ ತೆರಳಲಿದೆ. ಈ ಯೋಜನೆ ಅವಧಿ 120 ರಿಂದ 125 ದಿನಗಳು ಎಂದು ತಿಳಿದುಬಂದಿದೆ.

 

Share Post