ಗಂಡನನ್ನು ಸ್ನಾನಕ್ಕೆ ಕಳುಹಿಸಿ ಪತ್ನಿ ಬೇರೊಬ್ಬನ ಜೊತೆ ಎಸ್ಕೇಪ್
ಬೆಂಗಳೂರು; ಗಂಡನನ್ನು ಸ್ನಾನಕ್ಕೆ ಕಳುಹಿಸಿದ ಪತ್ನಿ ಇದೇ ವೇಳೆ ಬೇರೊಬ್ಬನ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಈ ಬಗ್ಗೆ ರಮೇಶ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ರಮೇಶ್ ಮದುವೆಯಾಗಿದ್ದರು. ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ಪತಿ ರಮೇಶ್ ಜೊತೆ ಖುಷಿಖುಷಿಯಾಗಿಯೇ ಇದ್ದ ಪತ್ನಿಗೆ ಅದೇನಾಯ್ತೋ ಗೊತ್ತಿಲ್ಲ. ಆಗಸ್ಟ್ 12ರಂದು ಬೆಳಗ್ಗೆ ಪತಿ ರಮೇಶ್‌ನನ್ನು ಸ್ನಾನ ಮಾಡುವಂತೆ ಬಾತ್ ರೂಮ್‌ಗೆ ಕಳುಹಿಸಿದ್ದಾಳೆ. ರಮೇಶ್ ಸ್ನಾನಕ್ಕೆ ಇಳಿಯುತ್ತಿದ್ದಂತೆ, ಹೊರನಿಂದ ಬಾತ್ ರೂಮ್ ಚಿಲಕ ಹಾಕಿದ್ದಾಳೆ. ನಂತರ ಮನೆಯ ಬಾಗಿಲನ್ನೂ ಲಾಕ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾಳೆ.
ಕಾರ್ತೀಕ್ ಎಂಬಾತನ ಜೊತೆ ಪತ್ನಿ ಹೋಗಿದ್ದಾಳೆ ಎಂದು ರಮೇಶ್ ಆರೋಪ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಎಸ್ಕೇಪ್ ಆಗಿರುವ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.