NationalPolitics

ಭಾರತ ಮಾತೆಯನ್ನು ಮೂರು ಭಾಗಗಳಾಗಿ ಒಡೆದಿದ್ದು ಇವರೇ; ಮೋದಿ

ನವದೆಹಲಿ; ವಿಪಕ್ಷಗಳು ಭಾರತ ಮಾತೆಯ ಹತ್ಯೆಯಾಗಿ ಎಂದು ಮಾತನಾಡುತ್ತಿದ್ದಾರೆ. ಆದ್ರೆ ಭಾರತಮಾತೆಯನ್ನು ಮೂರು ಭಾಗಗಳಾಗಿ ಒಡೆದವರೇ ಇವರು. ಆಗಸ್ಟ್‌ 14 ವಿಭಜನೆಯ ದಿನ ಎಂದು ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅವಿಶ್ವಾಸ ನಿರ್ಣಯದ ಮೇಲೆ ಉತ್ತರ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಮಣಿಪುರ ರಾಜ್ಯದಲ್ಲಿ ಶಾಂತಿ ನೆಲೆಸುವುದು ಗ್ಯಾರೆಂಟಿ. ಅದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ ಎಂದರು.

ಮಣಿಪುರದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಕೆಲಸ ಮಾಡುತ್ತಿವೆ. ಅಲ್ಲಿ ಶಾಂತಿ ನೆಲೆಸುವಂತೆ ನಾವು ಮಾಡುತ್ತೇವೆ. ಮಣಿಪುರ ರಾಜ್ಯದ ಅಭಿವೃದ್ಧಿಗೆ ನಾವು ಪಣತೊಡುತ್ತೇವೆ. ನಾವೆಲ್ಲರೂ ಒಟ್ಟಾಗಿ ಹೋರಾಡೋಣ, ಇಡೀ ದೇಶ ನಿಮ್ಮ ಜತೆಗಿದೆ ಎಂದು ಪ್ರಧಾನಿ ಮೋದಿ ಮಣಿಪುರ ಜನತೆಗೆ ಕರೆ ನೀಡಿದರು.

ಮಣಿಪುರ ವಿಚಾರ ಮುಂದಿಟ್ಟುಕೊಂಡು ವಿಪಕ್ಷಗಳ ನಾಯಕರು ಭಾರತ ಮಾತೆ ಬಗ್ಗೆ ಮಾತನಾಡಿದ್ದಾರೆ. ಅವರು ಆಡಿರುವ ಮಾತುಗಳಿಂದಾಗಿ ಭಾರತೀಯರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಕಾಂಗ್ರೆಸ್‌ನಲ್ಲಿ ನಾಯಕರ ಮನಸ್ಸಿನಲ್ಲಿ ನಿಜವಾಗಿಯೂ ಏನಿದೆ ಅನ್ನೋದು ಬಟಾಬಯಲಾಗಿದೆ. ವಿಪಕ್ಷಗಳು ವಿನಾಕಾರಣ ಮಣಿಪುರದ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಮೋದಿ ಹೇಳಿದರು.

Share Post