ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾಗೆ ಹೃದಯಾಘಾತ
ಬ್ಯಾಂಕಾಕ್; ಚಿನ್ನಾರಿಮುತ್ತ ಎಂದೇ ಖ್ಯಾತಿಯಾಗಿರೋ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ. ವಿಜಯ್ ರಾಘವೇಂದ್ರ ಅವರು ಕುಟುಂಬದ ಜೊತೆ ಬ್ಯಾಂಕಾಕ್ಗೆ ತೆರಳಿದ್ದರು. ಈ ವೇಳೆ ಸ್ಪಂದನಾ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಜಯ್ ರಾಘವೇಂದ್ರ ಅವರು ಆಗಾಗ ಫ್ಯಾಮಿಲಿ ಜೊತೆ ವಿದೇಶ ಪ್ರವಾಸಗಳಿಗೆ ಹೋಗುತ್ತಿರುತ್ತಾರೆ. ಶೂಟಿಂಗ್ನಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಅವರು ಫ್ಯಾಮಿಲಿ ಜೊತೆ ಕಳೆಯುತ್ತಾರೆ. ಫ್ಯಾಮಿಲಿ ಜೊತೆ ಸುತ್ತಾಡೋದಕ್ಕೆ ಹೋಗುತ್ತಾರೆ. ಹೀಗಾಗಿ ಈ ಬಾರಿಯೂ ಕೂಡಾ ವಿಜಯ ರಾಘವೇಂದ್ರ ಅವರು ಪತ್ನಿ ಜೊತೆ ಬ್ಯಾಂಕಾಕ್ಗೆ ಮೂರು ದಿನಗಳ ಹಿಂದೆ ಹೋಗಿದ್ದರು. ಈ ವೇಳೆ ಸ್ಪಂದನಾಗೆ ಹೃದಯಾಘಾತವಾಗಿದೆ.
ಸ್ಪಂದನಾ ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಅವರ ಪುತ್ರಿ. ನಾಳೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರಲಾಗುತ್ತದೆ ಎಂದು ತಿಳಿದುಬಂದಿದೆ.
ವಿಜಯ್ ರಾಘವೇಂದ್ರ ಅವರು ನಿರ್ಮಾಪಕ ಚನ್ನೇಗೌಡ ಅವರ ಪುತ್ರರಾಗಿದ್ದಾರೆ. ರಾಜ್ಕುಮಾರ್ ಅವರ ಸಂಬಂಧಿಗಳಾಗಿದ್ದಾರೆ. ಒಂದೂವರೆ ವರ್ಷದ ಹಿಂದಷ್ಟೇ ರಾಜ್ಕುಮಾರ್ ಪುತ್ರ ಪುನೀತ್ ರಾಜ್ಕುಮಾರ್ ಅವರು ದಿಢೀರ್ ಹೃದಯಘಾತಕ್ಕೆ ಬಲಿಯಾಗಿದ್ದರು. ಇದೀಗ ಅವರ ಸಂಬಂಧಿ ಸ್ಪಂದನಾ ಕೂಡಾ ಸಾವನ್ನಪ್ಪಿದ್ದು, ಅವರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.