ತಾಯಿ ಮಟನ್ ಚಾಪ್ಸ್ ಮಾಡಿ ಕೂತಿದ್ದಳು; ಆದ್ರೆ ಆತ ಜೈಲು ಮುಂದೆಯೇ ಕೊಲೆಯಾದ..!
ಬೆಂಗಳೂರು; ಮಗ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬರುತ್ತಾನೆ. ಆತನಿಗೆ ಇಷ್ಟವಾದ ಮಟನ್ ಚಾಪ್ಸ್ ಮಾಡಿ ತಾಯಿ ಖುಷಿಯಿಂದ ಮನೆಯಲ್ಲಿ ಕಾಯುತ್ತಿದ್ದಳು. ಆದ್ರೆ ಆತ ಜೈಲಿನಿಂದ ಬಿಡುಗಡೆಯಾದನಾದರೂ ಮನೆಗೆ ಮಾತ್ರ ಬರಲಿಲ್ಲ. ಕಾರಣ ಆತ ಜೈಲಿನಿಂದ ಹೊರಬರುತ್ತಿದ್ದಂತೆಯೇ ಕೊಲೆಯಾಗಿಹೋಗಿದ್ದಾನೆ.
ಕೊಲೆ ಪ್ರಕರಣವೊಂದರಲ್ಲಿ ಜೈಲಿನಲ್ಲಿ ಮಹೇಶ್ ಎಂಬಾತನಿಗೆ ಬೇಲ್ ಸಿಕ್ಕಿದ್ದರಿಂದ ನಿನ್ನೆ ಆತನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಇದನ್ನೇ ಕಾಯುತ್ತಿದ್ದ ರೌಡಿ ವಿಲ್ಸನ್ ಗಾರ್ಡನ್ ನಾಗ ಹಾಗೂ ಮತ್ತವನ ಗ್ಯಾಂಗ್, ಜೈಲಿನ ಹೊರಗಡೆಯೇ ಸಿದ್ದಾಪುರದ ಮಹೇಶ್‌ನನ್ನು ಕೊಲೆ ಮಾಡಿದ್ದಾರೆ. ಸಿದ್ದಾಪುರದ ಮಹೇಶ್ ರೌಡಿ ಶೀಟರ್ ಆಗಿದ್ದ. ಕೊಲೆ, ಸುಲಿಗೆ, ಕೊಲೆ ಯತ್ನ, ಸುಪಾರಿ ಕೊಲೆ ಸೇರಿದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ೨೦೧೨ರಲ್ಲಿ ಸಿದ್ದಾಪುರದ ಮಹೇಶ್, ವಿಲ್ಸನ್ ಗಾರ್ಡನ್ ನಾಗನ ಗೆಳೆಯ ಮದನ್ ಅಲಿಯಾಸ್ ಪಿಟೀಲ್‌ನನ್ನು ಕೊಲೆ ಮಾಡಿದ್ದರು. ಇದೇ ಕಾರಣಕ್ಕೆ ಆತನ ಜೈಲು ಸೇರಿದ್ದ. ನಿನ್ನೆ ಬೇಲ್ ಮೇಲೆ ಹೊರಬಂದಿದ್ದ ಮಹೇಶ್ ಕಾರಿನಲ್ಲಿ ಮನೆಯತ್ತ ಹೊರಟಿದ್ದ. ಇದೇ ವೇಳೆ ಕಾರು ಅಡ್ಡ ಹಾಕಿದ ವಿಲ್ಸನ್ ಗಾರ್ಡನ್ ನಾಗ ಹಾಗೂ ಆತನ ಸಹಚರರು ಹೊಸೂರ್ ರೋಡ್ ಸಿಗ್ನಲ್ ಬಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.