CrimeDistricts

ಮೊಬೈಲ್‌ ಚಾರ್ಜರ್‌ ಕೊಡಲಿಲ್ಲ ಅಂತ ನೇಣಿಗೆ ಶರಣಾದ ಯುವಕ

ತುಮಕೂರು; ಇಂದಿನ ಮಕ್ಕಳು ಮೊಬೈಲ್‌ಗೆ ಹೆಚ್ಚು ಅಡಿಕ್ಟ್‌ ಆಗುತ್ತಿದ್ದಾರೆ. ಅದಿಲ್ಲ ಅಂದ್ರೆ ಜೀವನವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಮೊಬೈಲ್‌ ಇಲ್ಲ ಅಂದ್ರೆ ಪ್ರಾಣವನ್ನೇ ತೆಗೆದುಕೊಳ್ಳುವ ಮಟ್ಟಕ್ಕೆ ಹೋಗುತ್ತಿದ್ದಾರೆ. ಪಾವಗಡ ತಾಲ್ಲೂಕಿನ ವೈ.ಎನ್‌.ಹೊಸಕೋಟೆ ಬಳಿಯ ಸಿಂಗರೆಡ್ಡಿಪಲ್ಲಿಯಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಮೊಬೈಲ್‌ ಚಾರ್ಜರ್‌ ಕೊಡದಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ. 

ಗ್ರಾಮದ ಆಶಾ ಕಾರ್ಯಕರ್ತೆ ವರಲಕ್ಷ್ಮಮ್ಮ ಅವರ ಮಗ ನಿಖಿಲ್‌ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಪಾವಗಡದ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ. ಈತ ಮೊಬೈಲ್‌ ದಾಸನಾಗಿದ್ದ. ಮನೆಯಲ್ಲಿದ್ದ ಈತ ತಾಯಿಯ ಬಳಿ ಮೊಬೈಲ್‌ ಚಾರ್ಜರ್‌ ಕೇಳಿದ್ದಾನೆ. ನನ್ನ ಬಳಿ ಇಲ್ಲ ಎಂದು ತಾಯಿ ಹೇಳಿದ್ದಾಳೆ. ಅನಂತರ ಬೇರೊಂದು ಮನೆಯಲ್ಲಿ ಹೂವು ಕಟ್ಟಲು ಆಕೆ ಹೋಗಿದ್ದಾಳೆ. ಈ ವೇಳೆ ನಿಖಿಲ್‌ ನೇಣಿಗೆ ಶರಣಾಗಿದ್ದಾನೆ.

ಕೆಲಸ ಮುಗಿದ ಮೇಲೆ ತಾಯಿ ಮನೆಗೆ ಬಂದಾಗ ಎಷ್ಟು ಬಾಗಿಲು ಬಡಿದರೂ ಮಗ ತೆಗೆದಿಲ್ಲ. ಅನುಮಾನ ಬಂದು ಸ್ಥಳೀಯರನ್ನು ಕರೆದು ಬಾಗಿಲು ಒಡೆಯಲಾಗಿದೆ. ಈ ವೇಳೆ ನಿಖಿಲ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ವೈ.ಎನ್‌.ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Share Post