BengaluruCrime

ತಾಯಿ ಜೊತೆ ಅನ್ಯೋನ್ಯತೆ ಹಿನ್ನೆಲೆ; ಅಡುಗೆಭಟ್ಟನನ್ನು ಕೊಂದ ಮಗ

ಬೆಂಗಳೂರು; ತನ್ನ ತಾಯಿ ಜೊತೆ ಅನ್ಯೋನ್ಯವಾಗಿರುವುದನ್ನೇ ತಪ್ಪಾಗಿ ತಿಳಿದ ಮಗನೊಬ್ಬ ಅಡುಗೆಭಟ್ಟನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ರಾಜಾಜಿನಗರದ ಆರನೇ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾರೆ. ಮಾಗಡಿ ರೋಡ್‌ ಠಾಣೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ರವಿ ಭಂಡಾರಿ ಎಂಬ ಅಡುಗೆ ಭಟ್ಟನೇ ಕೊಲೆಗೀಡಾಗಿರುವ ವ್ಯಕ್ತಿ. ಈತ ರಾಜಾಜಿನಗರದ ಪಿಜಿಒಂದರಲ್ಲಿ ಅಡುಗೆಭಟ್ಟನಾಗಿ ಕೆಲಸ ಮಾಡುತ್ತಿದ್ದ. ಆರೋಪಿ ರಾಹುಲ್‌ ತಾಯಿ ಅದೇ ಪಿಜಿಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತಿದ್ದಳು. ಅಡುಗೆ ಭಟ್ಟ ರವಿ ಭಂಡಾರಿ ರಾಹುಲ್‌ ತಾಯಿ ಜೊತೆ ಅನ್ಯೋನ್ಯತೆಯಿಂದ ಮಾತನಾಡುತ್ತಿದ್ದ. ಇದನ್ನು ಕಂಡಿದ್ದ ರಾಹುಲ್‌ ತಪ್ಪಾಗಿ ತಿಳಿದಿದ್ದಾನೆ.

ತಾಯಿ ಪದ್ಮಾವತಿ ಪಿಜಿಯಲ್ಲಿದ್ದಾಗ, ಮಗ ರಾಹುಲ್‌, ರವಿ ಭಂಡಾರಿಗೆ ಕರೆ ಮಾಡಿ ತನ್ನ ಮನೆಗೆ ಕರೆಸಿಕೊಂಡಿದ್ದಾನೆ. ಅಲ್ಲಿಗೆ ಬಂದ ಆತನ ಮೇಲೆ ಚಾಕುವಿನಿಂದ ದಾಳಿ ಮಾಡಿ ಕೊಲೆ ಮಾಡಿದ್ದಾನೆ.

 

Share Post