CinemaHealthNational

ಇಶಾ ಫೌಂಡೇಶನ್‌ನಲ್ಲಿ ಸಮಂತಾ; ಧ್ಯಾನಕ್ಕೆ ಶರಣಾದ ಸೌತ್‌ ಬ್ಯೂಟಿ

ಕೊಯಮತ್ತೂರು; ವಿಚ್ಛೇದನ ಪಡೆದ ಮೇಲೆ ನಟಿ ಸಮಂತಾ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಯೋಸಿಟಿಸ್‌ ಕಾಯಿಲೆಯಿಂದ ಅವರು ಬಳಲುತ್ತಿದ್ದು, ಇದರ ನಡುವೆಯೂ ಸಿನಿಮಾ ಹಾಗೂ ವೆಬ್‌ ಸಿರೀಸ್‌ ಮಾಡಿದ್ದರು. ಇದೀಗ ಅವರು, ಚಿತ್ರರಂಗಕ್ಕೆ ಒಂದು ವರ್ಷ ಬ್ರೇಕ್‌ ಹಾಕಿದ್ದಾರೆ. ಒಂದು ವರ್ಷ ಆಧ್ಯಾತ್ಮದತ್ತ ಮುಖ ನೆಟ್ಟಿದ್ದಾರೆ. ಈ ಮೂಲಕ ಅವರು ಅನಾರೋಗ್ಯ ಸಮಸ್ಯೆಯನ್ನು ಹೋಗಲಾಡಿಸಲು ಮುಂದಾಗಿದ್ದಾರೆ.

ವಿಜಯ್‌ ದೇವರಕೊಂಡ ಜೊತೆಗಿನ ಖುಷಿ ಸಿನಿಮಾ ಮುಗಿಸಿದ ಮೇಲೆ ಸಮಂತಾ ಅವರು ತಮಿಳುನಾಡಿ ಕೊಯಮತ್ತೂರಿನ ಇಷಾ ಫೌಂಡೇಷನ್‌ನ ಧ್ಯಾನ ಕ್ಲಾಸ್‌ಗೆ ಸೇರಿಕೊಂಡಿದ್ದಾರೆ. ಧ್ಯಾನದ ಮೂಲಕ ಅವರು ಏಕಾಗ್ರತೆ ತಂದುಕೊಳ್ಳುತ್ತಿದ್ದಾರೆ.

ಸದ್ಗುರುವಿನ ಅನುಯಾಯಿಯಾಗಿರೋ ಸಮಂತಾ, ಇಶಾ ಸೆಂಟರ್ ನಲ್ಲಿ ಧ್ಯಾನದ ತರಗತಿಗೆ ಸೇರಿಕೊಂಡಿದ್ದು, ಧ್ಯಾನ, ಪೂಜೆ, ಪುನಸ್ಕಾರಗಳಲ್ಲಿ ತೊಡಗಿದ್ದಾರೆ. ಇತರ ಭಕ್ತಾಧಿಗಳ ಜೊತೆಗೆ ನೆಲಹಾಸಿನ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ತಮ್ಮ ಚಿತ್ರಗಳನ್ನು ಸಮಂತಾ ಹಂಚಿಕೊಂಡಿದ್ದಾರೆ.

 

Share Post