2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯದಿಂದ ಹಿಂದೆ ಸರಿದ ವಿಕ್ಟೋರಿಯಾ
ಮೆಲ್ಬರ್ನ್; 2026ರ ಕಾಮನ್‌ವೆಲ್ತ್ ಕ್ರೀಡಾಕೂಡಾ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ರಾಜ್ಯದಲ್ಲಿ ನಡೆಯಬೇಕಿತ್ತು. ಆದ್ರೆ, ವಿಕ್ಟೋರಿಯಾ ರಾಜ್ಯ ಕ್ರೀಡಾಟಕೂಟದ ಆತಿಥ್ಯದಿಂದ ಹಿಂದೆ ಸರಿದಿದೆ. ಈ ಕ್ರೀಡಾಕೂಟ ಆಯೋಜನೆಗೆ ಕನಿಷ್ಠ ಎಂದರೂ 2 ಶತಕೋಟಿ ಆಸ್ಟ್ರೇಲಿಯನ್ ಡಾಲರ್ ಬೇಕಾಗುತ್ತದೆ. ತುಂಬಾ ಚೆನ್ನಾಗಿ ಮಾಡಬೇಕು ಅಂದ್ರೆ, 7 ಶತಕೋಟಿ ಆಸ್ಟ್ರೇಲಿಯನ್ ಡಾಲರ್ ಬೇಕಾಗಬಹುದು, ಇದು ನಮ್ಮ ವಾರ್ಷಿಕ ಬಜೆಟ್‌ಗಿಂದ ಮೂರು ಪಟ್ಟು ಹೆಚ್ಚಾಗುತ್ತದೆ. ಹೀಗಾಗಿ ನಾವು ಆತಿಥ್ಯ ವಹಿಸಲು ಸಾಧ್ಯವಿಲ್ಲ ಎಂದು ವಿಕ್ಟೋರಿಯಾ ರಾಜ್ಯದ ಪ್ರಧಾನ ಅಧಿಕಾರಿಯೊಬ್ಬರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕ್ರೀಡಾಕೂಟಕ್ಕಾಗಿ ನಾವು ಆಸ್ಪತ್ರೆ ಹಾಗೂ ಶಾಲೆಗಳಿಗಾಗಿ ಮೀಸಲಿಟ್ಟ ಹಣವನ್ನು ತೆಗೆಯಬೇಕಾಗುತ್ತದೆ. ಹಾಗೆ ಮಾಡೋದಕ್ಕೆ ನಾವು ಇಷ್ಟಪಡೋದಿಲ್ಲ. ಹೀಗಾಗಿ ಈ ಒಪ್ಪಂದವನ್ನು ಅಂತ್ಯಗೊಳಿಸುವಂತೆ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತಿಳಿಸಲು ಹೇಳಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆಂಡ್ರ್ಯೂಸ್ ಆತಿಥ್ಯ ನಿರಾಕರಿಸಲು ನಿರ್ಧಾರ ಪ್ರಕಟಿಸಿದ ನಂತರ ಆಸೀಸ್ ರಾಜಧಾನಿ ಮೇಲ್ಬರ್ನ್‌ನಲ್ಲಿ ಕ್ರೀಡಾಕೂಟ ಆಯೋಜಿಸಲು ನಿರ್ಧರಿಸಲಾಯಿತು.