InternationalLifestyle

ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಇನ್ಮುಂದೆ ಟ್ವಿಟರ್‌ ಕೂಡಾ ಹಣ ಕೊಡುತ್ತೆ..!

ವಾಷಿಂಗ್ಟನ್‌; ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಯೂಟ್ಯೂಬ್‌, ಫೇಸ್‌ಬುಕ್‌ ಮುಂತಾದ ಸೋಷಿಯಲ್‌ ಮೀಡಿಯಾಗಳು ಹಣ ನೀಡುತ್ತಿವೆ. ಇದೀಗ ಟ್ವಿಟರ್‌ ಕೂಡಾ ತನ್ನ ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಹಣ ನೀಡಲು ಮುಂದಾಗಿದೆ. ಬರುವ ಜಾಹೀರಾತುಗಳ ಆದಾಯದಲ್ಲಿ ಒಂದಿಷ್ಟು ಪಾಲು ಕಂಟೆಂಟ್‌ ಕ್ರಿಯೇಟರ್‌ಗಳಿವೆ ಸಿಗಲಿದೆ. ಈ ಬಗ್ಗೆ ಟ್ವಿಟರ್‌ ಸಂಸ್ಥೆ ಅಧಿಕೃತ ಘೋಷಣೆ ಮಾಡಿದೆ. ಆದ್ರೆ ವೆರಿಫೈಡ್‌ ಟ್ವಿಟರ್‌ ಖಾತೆ ಹೊಂದಿರುವ ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಮಾತ್ರ ಈ ಅವಕಾಶ ಸಿಗಲಿದೆ.

ತಮ್ಮ ರಿಪ್ಲೈಗಳಲ್ಲಿ ಪ್ರದರ್ಶಿಸಲಾದ ಜಾಹೀರಾತು ಆದಾಯದಲ್ಲಿ ಪಾಲು ಸಿಗಲಿದೆ. ಈ ಸೌಲಭ್ಯಕ್ಕೆ ಅರ್ಹರಾಗಲು ಕಂಟೆಂಟ್‌ ಕ್ರಿಯೇಟರ್‌ಗಳು ಕಳೆದ 3 ತಿಂಗಳಲ್ಲಿ ತಮ್ಮ ಪೋಸ್ಟ್‌ಗಳಿಗೆ ಕನಿಷ್ಠ 50 ಲಕ್ಷ ಇಂಪ್ರೆಶನ್‌ಗಳನ್ನ ಪಡೆದಿರಬೇಕು. ಆಗ ಮಾತ್ರ ಅವರು ಅರ್ಹರಾಗುತ್ತಾರೆ. ಜೊತೆಗೆ ಸ್ಟ್ರೈಪ್‌ ಪೇಮೆಂಟ್‌ ಅಕೌಂಟ್‌ ಹೊಂದಿರಬೇಕಾಗುತ್ತದೆ.

Share Post