ಗೃಹಿಣಿ ಹತ್ಯೆ ಮಾಡಿ ಮಗು ಅಪಹರಣ; ಲವರ್ ಈ ಕೆಲಸ ಮಾಡಿಬಿಟ್ನಾ..?
ಬೆಂಗಳೂರು; ಮನೆಯಲ್ಲಿದ್ದ ಗೃಹಿಣಿಯನ್ನು ಕೊಲೆ ಮಾಡಿ ಐದು ವರ್ಷದ ಮಗುವನ್ನು ಅಪಹರಣ ಮಾಡಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿ ಕೊಳೂರು ಗ್ರಾಮದ 27 ವರ್ಷದ ಗೃಹಿಣಿ ಭಾರತಿ ಕೊಲೆಯಾದಾಕೆ. ಭಾರತಿಯ ಪ್ರಿಯಕರ ಹರೀಸ್ ಎಂಬಾತನೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಭಾರತಿ ಪತಿ ಮನೆಗೆ ಬಂದಾಗ ಭಾರತಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಮಗುವನ್ನು ಹುಡುಕಿದಾಗ ಎಲ್ಲೂ ಸಿಕ್ಕಿಲ್ಲ. ಕೂಡಲೇ ಆತ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಂದಾಜಿನ ಪ್ರಕಾರಣ ಭಾರತಿ ಪ್ರಿಯಕರನಾಗಿದ್ದ ಹರೀಸ್ ಎಂಬಾತನೇ ಈ ಕೃತ್ಯ ಎಸಗಿರಬಹುದು ಎಂದು ಹೇಳಲಾಗುತ್ತಿದೆ. ಇದಲ್ಲದೆ ಪೊಲೀಸರಿಗೆ ಇನ್ನೂ ಹಲವು ಅನುಮಾನಗಳಿದ್ದು, ಆ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ.