BengaluruCrime

ಡಬಲ್‌ ಮರ್ಡರ್‌ ಕೇಸ್‌ಗೆ ಭಾರಿ ಟ್ವಿಸ್ಟ್‌; ಆಕೆ, ಆತ, ಆ ಕಂಪನಿ ಹಾಗೂ ಆ ಕೆಲಸ..!

ಬೆಂಗಳೂರು; ನಿನ್ನೆ ಸಂಜೆ ಏರೋನಿಕ್ಸ್‌ ಇಂಟರ್‌ನೆಟ್‌ ಕಂಪನಿ ಎಂಡಿ ಫಣೀಂದ್ರ ಹಾಗೂ ಸಿಇಒ ವಿನು ಕುಮಾರ್‌ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಆರು ಮಂದಿಯನ್ನು ಬಂಧಿಸಲಾಗಿದೆ. ಇನ್ನು ಈ ಕೊಲೆಗಳಿಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಮೂರು ಆಯಾಮಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಆರೊಪಿಗಳಾದ ಜೋಕರ್ ಫಿಲಿಕ್ಸ್, ವಿನಯ್‌ ರೆಡ್ಡಿ, ಶಿವು ಸೇರಿ ಆರು ಮಂದಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಂದಹಾಗೆ ಕೊಲೆಯಾದ ಫಣೀಂದ್ರ ಹಾಗೂ ಕೊಲೆಗಾರ ಫಿಲಿಕ್ಸ್‌ ಈ ಹಿಂದೆ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜಿ ನೆಟ್‌ ಹೆಸರಿನ ಕಂಪನಿಯಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರು. ಈ ವೇಳೆ ಫಿಲಿಕ್ಸ್‌ನನ್ನು ಕೆಲಸದಿಂದ ತೆಗೆಯಲಾಗಿತ್ತು. ಇದಕ್ಕೆ ಫಣೀಂದ್ರ ಅವರೇ ಕಾರಣ ಎಂದು ಫಿಲಿಕ್ಸ್‌ ನಂಬಿದ್ದ ಎನ್ನಲಾಗಿದೆ. ಫಣೀಂದ್ರ ಅವರು ಕಂಪನಿ ಬಿಟ್ಟ ಮೇಲೆ ಫಿಲಿಕ್ಸ್‌ ಮತ್ತೆ ಜಿ ನೆಟ್‌ ಕಂಪನಿಗೆ ಸೇರಿಕೊಂಡಿದ್ದ. ತನ್ನನ್ನು ಕೆಲಸದಿಂದ ತೆಗೆಯಲು ಫಣೀಂದ್ರ ಕಾರಣ ಎಂದು ನಂಬಿದ್ದ ಫಿಲಿಕ್ಸ್‌ ಈ ಕಾರಣಕ್ಕಾಗಿಯೇ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಒಂದು ಹುಡುಗಿಯ ಹೆಸರು ಕೂಡಾ ಈ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ. ಜಿ ನೆಟ್‌ ಕಂಪನಿಯಲ್ಲಿ ಕೆಲಸ ಮಾಡುವ ಒಂದು ಹುಡುಗಿಯನ್ನು ಫಣೀಂದ್ರ ಹಾಗೂ ಹಂತಕ ಫಿಲಿಕ್ಸ್‌ ಇಬ್ಬರೂ ಇಷ್ಟಪಡುತ್ತಿದ್ದರಂತೆ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯೂ ನಡೆದಿತ್ತಂತೆ. ನಮ್ಮ ಹುಡ್ಗು ವಿಚಾರಕ್ಕೆ ಬಂದ್ರೆ ಮುಗಿಸ್ತೀನಿ ಎಂದು ಫಿಲಿಕ್ಸ್‌ ಅವಾಜ್‌ ಕೂಡಾ ಹಾಕಿದ್ದ ಎನ್ನಲಾಗಿದೆ. ಈ ನಡುವೆ ಹೊಸ ಕಂಪನಿ ಶುರು ಮಾಡಿದ್ದ ಫಣೀಂದ್ರ ಅವರು ಆ ಹುಡುಗಿ ಕರೆ ಮಾಡಿ ತಮ್ಮ ಕಂಪನಿಗೆ ಬರುವಂತೆ ಒತ್ತಾಯಿಸುತ್ತಿದ್ದರಂತೆ. ಇದರಿಂದ ಕೆರಳಿದ ಫಿಲಿಕ್ಸ್‌, ಫಣೀಂದ್ರರನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ತಡೆಯಲು ಬಂದ ವಿನುಕುಮಾರ್‌ ಮೇಲೂ ದಾಳಿ ನಡೆದಿದ್ದು, ಇದರಿಂದ ವಿನುಕುಮಾರ್‌ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಫಣೀಂದ್ರ ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಜಿ ನೆಟ್‌ ಕಂಪನಿ ಮಾಲೀಕನ ವಿರುದ್ಧವೂ ಅನುಮಾನ ಮೂಡಿದೆ. ಹೀಗಾಗಿ ಪೊಲೀಸರು ಆತನನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಫಣೀಂದ್ರ ಹೊರಬಂದು ಹೊಸ ಕಂಪನಿ ಶುರು ಮಾಡಿದ ಮೇಲೆ ಜಿ ನೆಟ್‌ ಕಂಪನಿ ಲಾಸ್‌ ಆಗಿದೆಯಂತೆ. ಉದ್ಯೋಗಿಗಳಿಗೆ ಸಂಬಳ ನೀಡಲೂ ಆಗುತ್ತಿಲ್ಲವಂತೆ. ಇದಕ್ಕೆಲ್ಲಾ ಕಾರಣ ಫಣೀಂದ್ರ ಎಂದು ಜಿ ನೆಟ್‌ ಕಂಪನಿ ಮಾಲೀಕ ಕೆಂಡಕಾರುತ್ತಿದ್ದರಂತೆ. ಅವರು ಕೂಡಾ ಫಿಲಿಕ್ಸ್ ಗೆ ಕುಮ್ಮಕ್ಕು ನೀಡಿರಬಹುದೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

Share Post