CrimeDistricts

KSRTC ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣ; ಅಂಬುಲೆನ್ಸ್‌ ತಡೆದಿದ್ದೇಕೆ ಮಾಜಿ ಶಾಸಕ..?

ಮಂಡ್ಯ; ನಾಗಮಂಗಲದ ಕೆಎಸ್‌ಆರ್‌ಟಿಸಿ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್‌ ಸಿಗುತ್ತಿದೆ. ತೀವ್ರ ಅಸ್ವಸ್ಥನಾಗಿದ್ದ ಚಾಲಕನನ್ನು ನಾಗಮಂಗಲ ಬಿಜಿಎಸ್‌ನಿಂದ ಮೈಸೂರಿಗ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಜೆಡಿಎಸ್‌ನ ಮಾಜಿ ಶಾಸಕ ಸುರೇಶ್‌ ಗೌಡರು ಹಾಗೂ ಅವರ ಕಾರ್ಯಕರ್ತರು ಅಂಬುಲೆನ್ಸ್‌ನ್ನು ತಡೆದಿದ್ದರು. ಚಾಲಕ ಜಗದೀಶ್‌ ಅವರನ್ನು ಬದುಕಿಸುವ ಉದ್ದೇಶ ಜೆಡಿಎಸ್‌ಗೆ ಇರಲಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್‌ ಅಂದು ನಡೆದ ಘಟನೆ ವಿಡಿಯೋವನ್ನೇ ರಿಲೀಸ್‌ ಮಾಡಿ ಸ್ಪಷ್ಟನೆ ಕೊಟ್ಟಿದೆ.

ಜುಲೈ ಆರರಂದು ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಚಾಲಕ ಜಗದೀಶ್‌ ಅವರನ್ನು ಮೈಸೂರಿಗೆ ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ನಾಗಮಂಗಲದ ಟಿಬಿ ವೃತ್ತದ ಬಳಿ ಮಾಜಿ ಶಾಸಕ ಸುರೇಶ್‌ ಗೌಡರು ಹಾಗೂ ಅವರ ಬೆಂಬಲಿಗರು ಅಡ್ಡಗಟ್ಟಿದ್ದರು. ಇದಕ್ಕೆ ಸಾಕ್ಷಿಯಾಗಿ ವಿಡಿಯೋ ರಿಲೀಸ್‌ ಮಾಡಿರುವ ಜೆಡಿಎಸ್‌, ನಾವು ಎಲ್ಲಿಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಕೇಳಲು ಅಂಬುಲೆನ್ಸ್‌ ನಿಲ್ಲಿಸಿದ್ದೆವು ಎಂದು ಹೇಳಿದ್ದಾರೆ. ಜಗದೀಶ್‌ನ ಎಲ್ಲಿಗೆ ಕರೆದುಕೊಂಡು ಹೋಗ್ತಾ ಇದ್ದೀರಾ? ಬಿಜಿಎಸ್‌ನಲ್ಲಿ ಚಿಕಿತ್ಸೆ ಕೊಡೋಕೆ ಆಗಲ್ವಾ? ಮಣಿಪಾಲ್‌ಗೆ ಕರೆದುಕೊಂಡು ಹೋಗ್ತಾ ಇದ್ದೀರಾ? ಸರಿ ಹೋಗಿ ಎಂದು ಸುರೇಶ್ ಗೌಡ ಮಾತನಾಡಿರುವ ವೀಡಿಯೋ ಕೂಡಾ ಅದರಲ್ಲಿದೆ.

Share Post