ಜುಲೈ 14ಕ್ಕೆ ಚಂದ್ರಯಾನ-3 ಉಡಾವಣೆ; ಸಿದ್ಧತೆಗಳು ಹೇಗಿವೆ..?
ಶ್ರೀಹರಿಕೋಟಾ; ಭಾರತದ ಚಂದ್ರಯಾನದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಇದಕ್ಕಾಗಿ ಇಸ್ರೋ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದೇ 14ರಂದು ಚಂದ್ರಯಾನ-3 ಉಡಾವಣೆಯಾಗಲಿವೆ. ಆಂದ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೊನೆಯ ಹಂತದ ತಪಾಸಣೆಗಳು, ಉಡಾವಣೆ ಮಾಡುವ ದಿನದ ನಡೆಯಬೇಕಾದ ಪ್ರಕ್ರಿಯೆಗಳ ಬಗ್ಗೆ ಈಗಾಗಲೇ ಸಿದ್ಧತೆಗಳು ನಡೆದಿವೆ. ಇನ್ನು ನಾಲ್ಕೇ ದಿನದಲ್ಲಿ ಪಿಎಸ್‌ಎಲ್‌ವಿ ರಾಕೇಟ್ ಚಂದ್ರನಲ್ಲಿಗೆಬ ಸ್ಯಾಟಲೈಟ್‌ನ್ನು ಹೊತ್ತೊಯ್ಯಲಿದೆ.
ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಡಾವಣೆ ಮಾಡಲಾಗುತ್ತದೆ. ಎಲ್ಲವೂ ಅಂದುಕೊಂಡತೆಯೇ ಆದರೆ, ಆಗಸ್ಟ್ 23ರಂದು ಅದು ಚಂದ್ರನ ಮೇಲೆ ಸೇಫಾಗಿ ಲ್ಯಾಂಡ್ ಆಗಲಿದೆ. ಚಂದ್ರನ ಮೇಲೆ ಸೂರ್ಯೋದಯ ಯಾವಾಗ ಆಗುತ್ತದೆ ಎಂಬುದರ ಆಧಾರದ ಮೇಲೆ ಈ ದಿನಾಂಕ ನಿಗದಿ ಮಾಡಲಾಗುತ್ತದೆ. ಒಂದು ವಿಳಂಬವಾದರೆ ಸೆಪ್ಟೆಂಬರ್‌ನಲ್ಲಿ ಚಂದ್ರನ ಮೇಲೆ ಲ್ಯಾಂಡಿಂಗ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ನಾವು ಚಂದ್ರಯಾನ-3 ಲ್ಯಾಂಡಿಂಗ್ ಸರಿಯಾಗಿ ಆಗುವಂತೆ ಎಚ್ಚರಿಕೆ ವಹಿಸಿದ್ದೇವೆ. ಲ್ಯಾಂಡಿಂಗ್ ನಂತರ ರೋವರ್ ಹೊರಬರಲಿದ್ದು, ಅದು 6 ಚಕ್ರಗಳನ್ನು ಒಳಗೊಂಡಿದೆ. ಈ ರೋವರ್ ಚಂದ್ರನ ಮೇಲೆ 14 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ವಿಜ್ಞಾನಿಗಳು ನಿರೀಕ್ಷೆ ಮಾಡಿದ್ದಾರೆ. ರೋವರ್‌ನಲ್ಲಿ ಬಹು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ರೋವರ್‌ನಲ್ಲಿ ಸೌರ ಫಲಕ ಕೂಡಾ ಅಳವಡಿಸಲಾಗಿದ್ದು, ಅದನ್ನು ಪರೀಕ್ಷೆ ಮಾಡಿ ಖಾತರಿ ಕೂಡಾ ಮಾಡಿಕೊಳ್ಳಲಾಗಿದೆ.