BengaluruCrime

ವಿಧಾನಸೌಧಕ್ಕೆ ಬಂದಿದ್ದ ಮಹಿಳೆ ಬ್ಯಾಗ್‌ನಲ್ಲಿ ಚಾಕು ಪತ್ತೆ..!

ಬೆಂಗಳೂರು; ಮೊನ್ನೆ ಅಂದ್ರೆ ಶುಕ್ರವಾರ ವ್ಯಕ್ತಿಯೊಬ್ಬರು ವಿಧಾನಸಭೆ ಪ್ರವೇಶಿಸಿ, ಶಾಸಕರೊಬ್ಬರ ಸೀಟ್‌ನಲ್ಲಿ ಕುಳಿತಿದ್ದರು. ಈ ಪ್ರಕರಣದ ನಂತರ ವಿಧಾನಸೌಧದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಎಲ್ಲರನ್ನೂ ತಪಾಸಣೆ ಮಾಡಿಯೇ ಕಳುಹಿಸಲಾಗುತ್ತಿದೆ. ಈ ನಡುವೆ ತಪಾಸಣೆ ವೇಳೆ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿ ಚಾಕು ಪತ್ತೆಯಾಗಿದೆ. ಹೀಗಾಗಿ ಪೊಲೀಸರು ಚಾಕುವನ್ನು ವಶಪಡಿಸಿಕೊಂಡು, ಮಹಿಳೆಯರನ್ನು ವಿಚಾರಣೆ ನಡೆಸಿದ್ದಾರೆ.

ಆ ಮಹಿಳೆ ವಿಧಾನಸೌಧದ ಪೂರ್ವ ಬಾಗಿಲಿನಿಂದ ಪ್ರವೇಶ ಮಾಡಿದ್ದರು. ಈ ವೇಳೆ ಅಲ್ಲಿದ್ದ ಬ್ಯಾಗೇಜ್‌ ಸ್ಕ್ಯಾನಿಂಗ್‌ ಮಷಿನ್‌ನಲ್ಲಿ ಆಕೆ ಬ್ಯಾಗ್‌ನ್ನು ಸ್ಕ್ಯಾನ್‌ ಮಾಡಲಾಗಿದೆ. ಈ ವೇಳೆ ಬ್ಯಾಗ್‌ನಲ್ಲಿ ಚಾಕು ಸಿಕ್ಕಿದೆ. ಕೂಡಲೇ ಸಿಬ್ಬಂದಿ ಆ ಬ್ಯಾಗ್‌ನಲ್ಲಿದ್ದ ಚಾಕು ವಶಕ್ಕೆ ತೆಗೆದುಕೊಂಡಿದ್ದಾರೆ. ಮಹಿಳೆಯನ್ನು ಕೂಡಾ ಪೊಲೀಸರು ವಶಕ್ಕೆ ತೆಗೆದುಕೊಂಡು ಕೆಲಕಾಲ ವಿಚಾರಣೆ ನಡೆಸಿದ್ದಾರೆ.

ಮೂಲಗಳ ಪ್ರಕಾರ ಆಕೆ ವಿಧಾನಸೌಧದ ಮಹಿಳಾ ಸಿಬ್ಬಂದಿ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಮೊನ್ನೆ ಭದ್ರತಾ ಲೋಪವಾದ ಹಿನ್ನೆಲೆಯಲ್ಲಿ ಸದನದೊಳಗೆ ಪ್ರವೇಶಿಸುವಾಗ ಭದ್ರತಾ ಸಿಬ್ಬಂದಿ ಪರೀಕ್ಷಿಸಿ ಶಾಸಕರನ್ನು ಒಳಬಿಡುತ್ತಿದ್ದಾರೆ. ಅವರ ಕೈಗೆ ಶಾಸಕರ ಪಟ್ಟಿ ಹಾಗೂ ಫೋಟೋಗಳನ್ನು ಕೊಡಲಾಗಿದೆ. ಅದನ್ನು ನೋಡಿ ತಾಳೆ ಮಾಡಿಯೇ ಶಾಸಕರನ್ನು ಒಳಬಿಡಲಾಗುತ್ತಿದೆ.

Share Post