ಮಳೆಯಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನಾರಂಭ; ಹೆಲಿಕಾಪ್ಟರ್ ಸೇವೆ ಕೂಡಾ ಇದೆ..
ಶ್ರೀನಗರ; ಕೆಲ ದಿನಗಳಿಂದ ಭಾರಿ ಮಳೆ ಹಾಗೂ ಹಿಮದಿಂದಾಗಿ ಭೂಕುಸಿತ ಉಂಟಾಗಿ ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತಗೊಂಡಿತ್ತು. ಕಳೆದ ಮೂರು ದಿನಗಳಿಂದ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಆದ್ರೆ ಇಂದಿನಿಂದ ಮತ್ತೆ ಅಮರನಾಥ ಯಾತ್ರೆ ಪುನಾರಂಭ ಮಾಡಲಾಗಿದೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಹೆಲಿಕಾಪ್ಟರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ನಡೆದುಕೊಂಡು ಹೋಗೋಕೆ ಆಗದವರು ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡಬಹುದಾಗಿದೆ.
ಬಾಲ್ಟಾಲ್ ಬೇಸ್ನಿಂದ ಮತ್ತೆ ಅಮರನಾಥ ಯಾತ್ರೆ ಪುನಾರಂಭ ಮಾಡಲಾಗಿದೆ. ನಿನ್ನೆಯೇ ಪಹಲ್ಗಾಮ್ ಬೇಸ್ನಿಂದ ಯಾತ್ರೆ ಪುನಾರಂಭವಾಗಿತ್ತು. ನಿನ್ನೆ 6 ಸಾವಿರದ 491 ಮಂದಿ ಅಮರನಾಥನ ದರ್ಶನ ಪಡೆದಿದ್ದಾರೆ. ಇಂದು ಬಾಲ್ಟಾಲ್ ಭಾಗದಲ್ಲೂ ಹಾವಾಮಾನ ಪರಿಸ್ಥಿತಿ ಸುಧಾರಿಸಿದೆ. ಈ ಹಿನ್ನೆಲೆಯಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ಬಾರಿ ಇದುವರೆಗೆ 116 ಸಾಧುಗಳು, 6 ಸಾಧ್ವಿಗಳು ಸೇರಿ ಈವರೆಗೂ 93,929 ಯಾತ್ರಾರ್ಥಿಗಳು ಅಮರನಾಥನ ದರ್ಶನ ಪಡೆದಿದ್ದಾರೆ ಎಂದು ತಿಳಿದುಬಂದಿದೆ.