International

ಮಾಜಿ ಕ್ರಿಕೆಟಿಗ ಶೇನ್‌ವಾರ್ನ್‌ಗೆ ಅಪಘಾತದಲ್ಲಿ ಗಾಯ

ಸಿಡ್ನಿ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್‌ವಾರ್ನ್‌ ಸಿಡ್ನಿಯಲ್ಲಿ ನಡೆದ ಬೈಕ್‌ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಶೇನ್‌ವಾರ್ನ್‌ ಅವರು ಮಗ ಜಾಕ್ಸನ್‌ ಜೊತೆ ಸಿಡ್ನಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಬೈಕ್‌ ಸ್ಕಿಡ್‌ ಆಗಿ ಕೆಳಗೆ ಬಿದ್ದಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ. ಶೇನ್‌ ವಾರ್ನ್‌ ಅವರ ಮೂಗು, ಕಾಲು, ಬಲ ಪಾದದಲ್ಲಿ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಶೇನ್‌ವಾರ್ನ್‌ ಮನೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆದಿದ್ದರು. ಆದರೆ, ಮರುದಿನ ಬೆಳಗ್ಗೆ ತುಂಬಾ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 52 ವರ್ಷದ ಶೇನ್‌ ವಾರ್ನ್‌, ಎರಡು ಮೂರು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Share Post