International

ಮೌಂಟ್‌ಸಿಮೇರುನಲ್ಲಿ ಜ್ವಾಲಾಮುಖಿ ಸ್ಫೋಟ; 13 ಮಂದಿ ದುರ್ಮರಣ

ಜಕಾರ್ತಾ: ಇಂಡೋನೇಷ್ಯಾದ ಮೌಂಟ್‌ ಸಿಮೇರುನಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ದೊಡ್ಡ ದುರಂತ ಸಂಭವಿಸಿದೆ. ಈ ದುರಂತದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಘಟನೆಯಲ್ಲಿ ನಲವತ್ತು ಮಂದಿ ಗಾಯಗೊಂಡಿದ್ದಾರೆ. ಹಲವರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

ಸಿಮೇರು ಸಮೀಪದ ಲುಮಾಜಾಂಗ್‌ನ ಕೆರೊಬೊಕನ್ ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದವು. ಇಲ್ಲಿ ಜ್ವಾಲಾಮುಖಿ ಸ್ಫೋಟಗೊಂಡು ಲಾವಾ ಹರಿದ ಪರಿಣಾಮ, ಈ ಪ್ರದೇಶದ ಮನೆಗಳು ಬಹುತೇಕ ನಾಶವಾಗಿವೆ. ಸಮೀಪದ ಗ್ರಾಮಗಳ ನಿವಾಸಿಗಳೂ ಭೀತಿಯಿಂದ ಮನೆಬಿಟ್ಟು ಇತರೆಡೆಗಳಿಗೆ ತೆರಳಿದ್ದಾರೆ.

 

Share Post