ಮಲಯಾಳಂ ನಟಿಸುತ್ತಿದ್ದಾರೆ ಕನ್ನಡದ ನಟ ಡ್ಯಾನಿಶ್ ಸೇಠ್
ಬೆಂಗಳೂರು; ಹಂಬಲ್ ಪೊಲಿಟಿಷಿಯನ್ ನೊಗರಾಜ್ ಮೂಲಕ ಹೆಸರಾದ ನಟ ಡ್ಯಾನಿಶ್ ಸೇಠ್ ಮತ್ತೊಂದು ಕನ್ನಡ ಚಿತ್ರ ಒಪ್ಪಿಕೊಂಡಿದ್ದರು. ಇದೀಗ ಅವರು ಮಳಯಾಳಂ ಚಿತ್ರದಲ್ಲಿ ನಟಿಸೋಕೆ ಸಹಿ ಹಾಕಿದ್ದಾರೆ. ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಜೊತೆ ಅವರು ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಖ್ಯಾತ ನಟ ಮೋಹನ್ ಲಾಲ್ ಅವರು ಸದ್ಯ ಮಲೈಕೋಟಿ ವಾಲಿಬಾನ್ ಎಂಬ ಮಲಯಾಳಂ ಚಿತ್ರದಲ್ಲಿ ನಟಿಸ್ತಾ ಇದ್ದಾರೆ. ಈ ಸಿನಿಮಾದಲ್ಲಿ ಡ್ಯಾನಿಶ್ ಹೊಸ ಬಗೆಯ ಪಾತ್ರವನ್ನು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಂಥದ್ದೊಂದು ಪಾತ್ರ ನನಗೆ ಸಿಕ್ಕಿದ್ದು ಅದೃಷ್ಟ ಎಂದು ಡ್ಯಾನಿಶ್ ಸೇಠ್ ಹೇಳಿಕೊಂಡಿದ್ದಾರೆ.
ಕನ್ನಡದಲ್ಲೂ ಡ್ಯಾನಿಶ್ ಸೇಠ್ ಒಂದು ಸಿನಿಮಾ ಒಪ್ಪಿಕೊಂಡಿದ್ದು, ಈ ಸಿನಿಮಾಗೆ ‘ಕಿರಿಕ್ et11’ ಎಂದು ಹೆಸರಿಡಲಾಗಿದೆ.