CinemaHealth

ಚಿರಂಜೀವಿ ಮಾಜಿ ಅಳಿಯ ಶಿರೀಶ್‌ ಭಾರದ್ವಾಜ್‌ ಹಠಾತ್‌ ನಿಧನ!

ಹೈದರಾಬಾದ್‌; ತೆಲುಗಿನ ಖ್ಯಾತ ನಟ, ಮೆಗಾಸ್ಟಾರ್‌ ಚಿರಂಜೀವಿ ಅವರ ಕಿರಿಯ ಮಗಳು ಶ್ರೀಜಾ ಕೊನಿಡೇಲಾ ಅವರು ಮೊದಲ ಗಂಡ ಶಿರೀಷ್ ಭಾರದ್ವಾಜ್ ನಿಧನರಾಗಿದ್ದಾರೆ.. ಇಬ್ಬರು ಕಾಲೇಜಿನಲ್ಲಿದ್ದಾಗ ಲವ್‌ ಮಾಡಿದ್ದರು.. ಮನೆಯಿಂದ ಓಡಿಹೋಗಿ ಮದುವೆಯಾಗಿದ್ದರು.. ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ.. ಅನಂತರ ಕಾರಣಾಂತರಗಳಿಂದ ಶ್ರೀಜಾ ಗಂಡನಿಗೆ ವಿಚ್ಛೇದನ ನೀಡಿ ಮತ್ತೊಂದು ಮದುವೆಯಾಗಿದ್ದರು.. ಇತ್ತ ಶಿರೀಶ್‌ ಕೂಡಾ ಮತ್ತೊಂದು ಮದುವೆಯಾಗಿದ್ದ.. ಆದ್ರೆ ಅದೇನಾಯ್ತೋ ಏನೋ ದಿಢೀರ್‌ ಅಂತ ಶಿರೀಶ್‌ ನಿಧನರಾಗಿದ್ದಾರೆ..

ಕೆಲ ದಿನಗಳಿಂದ ಶಿರೀಶ್‌ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ..  ಶಿರೀಷ್ ಭಾರದ್ವಾಜ್ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು.. ಸಮಸ್ಯೆ ತೀವ್ರವಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದುಬಂದಿದೆ..  ಇಂದು ಬೆಳಗ್ಗೆ ಶಿರೀಷ್ ಭಾರದ್ವಾಜ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳು ತಿಳಿಯಬೇಕಿದೆ.

Share Post