DistrictsEconomyLifestyle

ಸ್ತ್ರೀʻಶಕ್ತಿʼಯಿಂದ ಹರಿದುಬಂತು ಭಾರಿ ಕಾಣಿಕೆ; ಹುಲಿಗೆಮ್ಮ ಹುಂಡಿಯಲ್ಲಿ ಕೋಟಿ ಹಣ!

ಕೊಪ್ಪಳ; ಶಕ್ತಿ ಯೋಜನೆ ಮೂಲಕ ರಾಜ್ಯ ಸರ್ಕಾರ ಎಲ್ಲಾ ಮಹಿಳೆಯರಿಯೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತೆ ಎಂದು ಬಹುತೇಕರು ಮಾತನಾಡಿದ್ದರು. ಆದ್ರೆ, ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದರಿಂದಾಗಿ ದೇಗುಲಗಳ ಆದಾಯ ಹೆಚ್ಚುತ್ತಿದೆ. ಹುಂಡಿಗಳಿಗೆ ಕೋಟಿ ಕೋಟಿ ಕಾಣಿಕೆ ಹರಿದುಬರುತ್ತಿದೆ. ಇದಕ್ಕೆ ಉದಾಹರಣೆ ಕೊಪ್ಪಳದ ಮುನಿರಾಬಾದ್‌ನ ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಿ ದೇಗುಲ.

ಕಳೆದ ಒಂದು ತಿಂಗಳಲ್ಲಿ ಹುಲಿಗೆಮ್ಮ ದೇವಿಯ ಹುಂಡಿ ತುಂಬಿದೆ. ಇದನ್ನು ತೆಗೆದು ಎಣಿಸಲಾಗಿದ್ದು, ಸುಮಾರು 99,69,725 ರೂ. ಕಾಣಿಕೆ ಸಂಗ್ರಹವಾಗಿದೆ. ಬರೀ 33 ದಿನಗಳ ಇಷ್ಟು ಮೊತ್ತದ ಕಾಣಿಕೆ ಹಣ ಸಂಗ್ರಹವಾಗಿ ದಾಖಲೆ ನಿರ್ಮಿಸಿದೆ. ಇನ್ನು ಹುಂಡಿಯಲ್ಲಿ 225 ಗ್ರಾಂ ಚಿನ್ನ, 14 ಕೆಜಿ ಬೆಳ್ಳಿ ಕೂಡಾ ಸಿಕ್ಕಿದೆ. ಈ ದೇಗುಲಕ್ಕೆ ಕರ್ನಾಟಕದ ಹಲವಾರು ಜಿಲ್ಲೆಗಳ ಜನ ನಡೆದುಕೊಳ್ಳುತ್ತಾರೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ.

Share Post