ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ವರ್ಚ್ಯುಯಲ್ ಮೂಲಕ ಚಾಲನೆ
ಧಾರವಾಡ; ಪ್ರಧಾನಿ ನರೇಂದ್ರ ಮೋದಿಯವರು ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ವರ್ಚ್ಯುವಲ್ ಮೂಲಕ ಚಾಲನೆ ನೀಡಿದರು. ಭೋಪಾಲದಿಂದ ವರ್ಚ್ಯುವಲ್ನಲ್ಲಿ ಒಟ್ಟು ಐದು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು.
ರಾಣಿ ಕಮಲಾಪತಿ-ಜಬಲ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್, ಖಜುರಾಹೊ-ಭೋಪಾಲ್-ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್, ಮಡಗಾಂವ್ (ಗೋವಾ)-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್, ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್, ಹತಿಯಾ-ಪಾಟ್ನಾ ಮಾರ್ಗದಲ್ಲಿ ಈ ಐದು ರೈಲು ಸಂಚಾರ ಮಾಡಲಿವೆ. ಚಾಲನೆಯ ನಂತರ ಧಾರವಾಡದಿಂದ ರೈಲು ಹೊರಡಲಿದ್ದು, ಸಂಜೆ 6.40ಕ್ಕೆ ಬೆಂಗಳೂರು ನಗರಕ್ಕೆ ವಂದೇ ಭಾರತ್ ರೈಲು ತಲುಪಲಿದೆ. ಉದ್ಘಾಟನೆಗೂ ಮೊದಲೇ ರೈಲಿನ ಎಲ್ಲಾ ಸೀಟುಗಳೂ ಬುಕ್ ಆಗಿವೆ.