BengaluruHealth

ಮಾದಕ ವಸ್ತುಗಳಿಂದ ದೂರವಿರಲು ಯುವ ಸಮುದಾಯಕ್ಕೆ ಡಿಕೆಶಿ ಕರೆ

ಬೆಂಗಳೂರು; ಇಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನ. ಈ ಹಿನ್ನೆಲೆಯಲ್ಲಿ ವಿಧಾನಸೌಧದಿಂದ ಕಂಠೀರವ ಸ್ಟೇಡಿಯಂವರೆಗೂ ಜಾಥಾ ನಡೆಸಲಾಯಿತು. ಇದರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಪಾಲ್ಗೊಂಡಿದ್ದರು. ಇದೇ ವೇಳೆ ಮಾತನಾಡಿದ ಅವರಯ ಮಾದಕ ವಸ್ತುಗಳಿಂದ ದೂರವಿರಲು ಯುವ ಸಮಯದಾಯಕ್ಕೆ ಕರೆ ನೀಡಿದರು.

ಡ್ರಗ್ಸ್‌ಗೆ ಕೆಲ ನಟ, ನಟಿಯರು ಕೂಡಾ ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ಕೂಡಾ ಡ್ರಗ್ಸ್‌ ಬಲೆಗೆ ಬಿದ್ದಿರುವುದು ಕಂಡುಬರುತ್ತಿದೆ. ಮುಂದಿನ ಪೀಳಿಗೆಯ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಇಂತಹ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ಉತ್ತಮ ಸಮಾಜಕ್ಕೆ ಯುವ ಶಕ್ತಿಯೇ ಆಧಾರ ಸ್ತಂಭ. ಆದರೆ ಡ್ರಗ್ಸ್ ಚಟದಿಂದಾಗಿ ಯುವಶಕ್ತಿಯು ತಪ್ಪು ದಾರಿ ಹಿಡಿಯುತ್ತಿದೆ. ಯುವಕರಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳೊಂದಿಗೆ ಹೆಜ್ಜೆ ಹಾಕುವುದು ನನಗೆ ತುಂಬಾ ಖುಷಿ ನೀಡಿದೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

 

ಇನ್ನು ಇದೇ ವೇಳೆ ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ನಿಂತ ಡಿ.ಕೆ.ಶಿವಕುಮಾರ್‌ ತಿಂಡಿ ಪಡೆದು ಮಕ್ಕಳೊಂದಿಗೆ ಸೇವಿಸಿದರು.

Share Post