ಯೋಗಾ ನನ್ನನ್ನು ಉಳಿಸಿದೆ; ಮಾಜಿ ಪ್ರಧಾನಿ ದೇವೇಗೌಡ
ಬೆಂಗಳೂರು; ಯೋಗಾ ನನ್ನನ್ನು ನಾನು ಉಳಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. ಇಂದು ವಿಶ್ವ ಯೋಗಾ ದಿನಾಚರಣೆ ಹಿನ್ನೆಲೆಯಲ್ಲಿ ದೇವೇಗೌಡರು ಟ್ವೀಟ್ ಮಾಡಿದ್ದು, ಯೋಗಾದ ಮಹತ್ವವನ್ನು ತಿಳಿಸಿದ್ದಾರೆ.
ನಾನು ದಿನವೂ ಯೋಗಾಭ್ಯಾಸ ಮಾಡುತ್ತೇವೆ. ಹೀಗಾಗಿ ಈ ವಯಸ್ಸಿನಲ್ಲೂ ನಾನು ಆರೋಗ್ಯವಾಗಿದ್ದೇನೆ. ಆರೋಗ್ಯ ಕಾಪಾಡಿಕೊಳ್ಳಲು ಮನುಷ್ಯ ಯೋಗಾ ಅತ್ಯಗತ್ಯ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಯೋಗಾಭ್ಯಾಸ ಮಾಡಿ ಮತ್ತು ಅದರ ಪ್ರಯೋಜನ ಕಂಡುಕೊಳ್ಳಿ ಎಂದು ಜನರಿಗೆ ದೇವೇಗೌಡರು ಸಲಹೆ ಕೂಡಾ ನೀಡಿದ್ದಾರೆ. ಜೊತೆಗೆ ಯೋಗಾ ಮಾಡುತ್ತಿರುವ ಫೋಟೋ ಒಂದನ್ನೂ ಲಗತ್ತಿಸಿದ್ದಾರೆ.