HealthInternational

ನೆದರ್ಲೆಂಡ್‌ನಲ್ಲಿ ಎಲ್ಲರಿಗೂ ಉಚಿತ ಸನ್‌ ಕ್ರೀಮ್‌ ಕೊಡ್ತಾರಂತೆ..!

ಆಂಸ್ಟರ್ಡ್ಯಾಮ್; ನೆದರ್ಲೆಂಡ್‌ನಲ್ಲಿ ಬೇಸಿಗೆಯಲ್ಲಿ ವಿಪರೀತ ಬಿಸಿಲಿರುತ್ತೆ. ಆ ಬಿಸಿಲಿಗೆ ತುಂಬಾ ಜನಕ್ಕೆ ಚರ್ಮದ ಕ್ಯಾನ್ಸರ್‌ ಬರುತ್ತಿದೆ. ಈ ಕಾರಣಕ್ಕಾಗಿಯೇ ಅಲ್ಲಿನ ಸರ್ಕಾರ ಎಲ್ಲರಿಗೂ ಉಚಿತವಾಗಿ ಸನ್‌ ಕ್ರೀಮ್‌ ನೀಡಲು ಮುಂದಾಗಿದೆ.

ನೆದರ್ಲೆಂಡ್‌ ದೇಶಾದ್ಯಂತ ಇರುವ ಶಾಲೆಗಳು, ವಿಶ್ವವಿದ್ಯಾಲಯಗಳು, ಉತ್ಸವಗಳು, ಉದ್ಯಾನವನಗಳು, ಕ್ರೀಡಾ ಸ್ಥಳಗಳು ಹಾಗೂ ಇತರೆ ಎಲ್ಲಾ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ನೆದರ್ಲೆಂಡ್‌ ಸರ್ಕಾರ ಸನ್ ಕ್ರೀಮ್ ಗಳನ್ನು ವಿತರಣೆ ಮಾಡುತ್ತಿದೆ. ವಾರಾಂತ್ಯದಲ್ಲಿ ಬ್ರೆಡಾದಲ್ಲಿ ನಡೆದ ಉತ್ಸವದಲ್ಲಿ ಸನ್ ಕ್ರೀಮ್ ವಿತರಿಸುವ ಅಭಿಯಾನಕ್ಕೆ ಚಾಲನೆ ಕೂಡಾ ಈಗಾಗಲೇ ನೀಡಲಾಗಿದೆ.

Share Post